ಕರ್ನಾಟಕ ಸಂಗೀತ ದಿಗ್ಗಜ ಪಿ.ಎಸ್. ನಾರಾಯಣಸ್ವಾಮಿ ನಿಧನ

(ನ್ಯೂಸ್ ಕಡಬ) newskadaba.com ಚೆನ್ನೈ, ಅ.17: ಕರ್ನಾಟಕ ಸಂಗೀತದ ಅತ್ಯುತ್ತಮ ಗುರುಗಳಲ್ಲಿ ಒಬ್ಬರಾದ, ಪದ್ಮಭೂಷಣ ವಿದ್ವಾನ್ ಪುಲಿಯೂರ್ ಸುಬ್ರಮಣ್ಯಂ ನಾರಾಯಣಸ್ವಾಮಿ(86 ವ.) ಕಳೆದ ದಿನ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು.

 

 

ಸಂಗೀತಗಾರ ಪಿ.ಎಸ್. ನಾರಾಯಣಸ್ವಾಮಿ ಅವರು ತಮ್ಮ ಗುರು ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಂದ ಕಲಿತ ಸಂಗೀತದ ಪಾಠದಿಂದ ಅತ್ಯುತ್ತಮ ಸಾಧಕರಾಗಿ ಗುರುತಿಸಿಕೊಂಡಿದ್ದರು. ಇವರು ಭಾರತ ಸರ್ಕಾರದ ಪದ್ಮಭೂಷಣ, ಮತ್ತು ತಮಿಳುನಾಡು ಸರ್ಕಾರದ ಕಲೈಮಣಿ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ನಾರಾಯಣಸ್ವಾಮಿ ಅವರು ಶೆಮ್ಮಂಗುಡಿ ಸಂಪ್ರದಾಯದ ಮಹತ್ವದ ಸಾಧಕರಾಗಿ, ತಮ್ಮದೇ ಆದ ಶೈಲಿಯ ‘ಮನೋಧರ್ಮ ಸಂಗೀತ’ವನ್ನು ವಿಕಸನಗೊಳಿಸಿದ ಕೀರ್ತಿ ಇವರದ್ದಾಗಿದೆ. ಮೃತರು ಪತ್ನಿ, ಮೂವರು ಪುತ್ರಿಯರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

Also Read  ಐತಿಹಾಸಿಕ ನಾಡಹಬ್ಬಕ್ಕೆ ಚಾಲನೆ ➤ ದಸರಾದಲ್ಲಿ ಆರು ಮಂದಿ ಕೊರೊನಾ ವಾರಿಯರ್ಸ್‌ಗೆ ಸನ್ಮಾನ

 

 

error: Content is protected !!
Scroll to Top