(ನ್ಯೂಸ್ ಕಡಬ) newskadaba.com ನವದೆಹಲಿ, ಅ.17: ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್ ಗಳ ವಿತರಣೆಯು ಮುಂದಿನ ತಿಂಗಳಿನಿಂದ ಮನೆ ಬಾಗಿಲಿಗೆ ಸರಬರಾಜಾಗುವ ಸಂದರ್ಭದಲ್ಲಿ ಒಟಿಪಿ ಅಥವಾ ಒನ್-ಟೈಮ್ ಪಾಸ್‌ವರ್ಡ್ ಕಡ್ಡಾಯವಾಗಿದೆ.
ನ. 1ರಿಂದ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಈ ಹೊಸ ಬದಲಾವಣೆ ಜಾರಿಗೆ ಬರಲಿದ್ದು, ಸಿಲಿಂಡರ್ ಹಸ್ತಾಂತರವಾಗಬೇಕಾದರೆ ಒಟಿಪಿ ನೀಡುವುದು ಕಡ್ಡಾಯ. ಇದರಿಂದ ಅಡುಗೆ ಅನಿಲ ಕಳ್ಳತನ ತಪ್ಪಿಸುವ ಮತ್ತು ಸರಿಯಾದ ಗ್ರಾಹಕನನ್ನು ಗುರುತಿಸುವ ಉದ್ದೇಶದಿಂದ ತೈಲ ಕಂಪೆನಿಗಳು “ಪೂರೈಕೆ ದೃಢೀಕರಣ ಕೋಡ್’ (ಡಿಎಸಿ) ಎಂಬ ಹೊಸ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿವೆ. ಇದು ಮೊದಲಿಗೆ 100 ಸ್ಮಾರ್ಟ್ ಸಿಟಿಗಳಲ್ಲಿ ಅನುಷ್ಠಾನಗೊಳ್ಳುತ್ತದೆ. ವಾಣಿಜ್ಯ ಸಿಲಿಂಡರ್‌ಗಳಿಗೆ ಈ ವ್ಯವಸ್ಥೆ ಅನ್ವಯಿಸುವುದಿಲ್ಲ.