(ನ್ಯೂಸ್ ಕಡಬ) newskadaba.com ನವದೆಹಲಿ, ಅ.08: ಕೊರೋನಾ ಸೋಂಕು ವಿಶ್ವದಾದ್ಯಂತ ಹರಡುತ್ತಿದ್ದು, ಕೊರೋನಾವನ್ನು ಭಾರತ ದಿಟ್ಟವಾಗಿ ಎದುರಿಸುತ್ತಿದೆ. ಈ ಅವಧಿಯಲ್ಲೂ ಪೂರ್ಣಪ್ರಮಾಣದ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಸಾಮರ್ಥ್ಯ ನಮ್ಮ ಯೋಧರಿಗಿದೆ. ಈ ವರ್ಷ ನಿಜಕ್ಕೂ ಅಭೂತಪೂರ್ವವಾಗಿದೆ.
ಇಂದು ಭಾರತೀಯ ವಾಯುಪಡೆ 89ನೇ ವರ್ಷಕ್ಕೆ ಕಾಲಿಡುತ್ತಿದ್ದು, ಯಾವುದೇ ಪರಿಸ್ಥಿತಿಯಲ್ಲಿ ದೇಶದ ಸಾರ್ವಭೌಮತ್ವ, ಹಿತಾಸಕ್ತಿ ರಕ್ಷಿಸಲು ಭಾರತೀಯ ವಾಯುಪಡೆ ಬದ್ಧವಾಗಿದೆ ಎಂದು ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಹೇಳಿದ್ದಾರೆ. ನಾವು ಯುಗವನ್ನು ಪ್ರವೇಶಿಸುತ್ತಿದ್ದು, ಏರೋಸ್ಪೇಸ್ ಶಕ್ತಿಯನ್ನು ಬಳಸಿಕೊಳ್ಳುತ್ತೇವೆ ಮತ್ತು ಸಮಗ್ರ ಮಲ್ಡಿ ಡೊಮೇನ್ ಕಾರ್ಯಾಚರಣೆಗಳನ್ನು ನಡೆಸುತ್ತೇವೆಂದು ಹೇಳಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ದೇಶದ ಸಾರ್ವಭೌಮತ್ವ, ಹಿತಾಸಕ್ತಿ ರಕ್ಷಿಸಲು ಭಾರತೀಯ ವಾಯುಪಡೆ ಬದ್ಧವಾಗಿದೆ ಎಂಬ ಭರವಸೆಯನ್ನು ಈ ಮೂಲಕ ಹೇಳಿದ್ದಾರೆ.