ವಶಪಡಿಸಿಕೊಂಡ ಡ್ರಗ್ಸ್ ಪೊಲೀಸರಿಂದಲೇ ಮಾರಾಟ..!!

(ನ್ಯೂಸ್ ಕಡಬ) newskadaba.com ದೆಹಲಿ, ಸೆ. 27:  160 ಕೆಜಿಯಷ್ಟು ಮಾರಿವಾನಾ ಮಾದಕ ದ್ರವ್ಯವನ್ನು ಜಪ್ತಿ ಮಾಡಿಕೊಂಡ ದೆಹಲಿ ಪೊಲೀಸರು, ಕೇವಲ ಒಂದು ಕೆಜಿಯಷ್ಟು ಪತ್ತೆ ಮಾಡಿರುವುದಾಗಿ ರಿಪೋರ್ಟ್ ಮಾಡಿ, ಮಿಕ್ಕಿದ್ದೆಲ್ಲವನ್ನೂ ಮಾರಾಟ ಮಾಡಿದ್ದಾರೆ.

ರಾಜಧಾನಿಯ ಜಹಂಗೀರ್‌ನಗರ ಪ್ರದೇಶದ ಇಬ್ಬರು ಸಬ್‌ ಇನ್ಸ್‌ಪೆಕ್ಟರ್‌ಗಳು ಹಾಗೂ ಇಬ್ಬರು ಕಾನ್ಸ್‌ಸ್ಟೇಬಲ್‌ಗಳು ಸೆಪ್ಟೆಂಬರ್‌ 11ರಂದು ಮಾಡಿದ ರೇಡ್‌ನಲ್ಲಿ 160 ಕೆಜಿ ಮಾರಿವಾನಾ ವಶಕ್ಕೆ ಪಡೆದುಕೊಂಡಿ‌ದ್ದಾರೆ. ಈ ಡ್ರಗ್‌ಗಳನ್ನು ಹಂಚುತ್ತಿದ್ದ ಅನೀಲ್ ಎಂಬಾತನನ್ನು 1.5 ಲಕ್ಷ ಲಂಚ ಪಡೆದು ಪೊಲೀಸರು  ಬಿಟ್ಟುಬಿಟ್ಟಿದ್ದಾರೆ ,ಎಂದು ಮೂಲಗಳು ತಿಳಿಸಿವೆ.

Scroll to Top