ಎಸ್ಡಿಪಿಐ ಆತೂರು ವಲಯ ವತಿಯಿಂದ ಬಿಜೆಪಿ ಸರಕಾರದ ರೈತ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಆತೂರು, ಸೆ. 25. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಆತೂರು ವಲಯ ವತಿಯಿಂದ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿದ ರೈತ ವಿರೋದಿ ಸುಗ್ರಿವಾಜ್ಞೆಗಳ ವಿರುದ್ದ ರಾಮಕುಂಜ ಮತ್ತು ಕೊಯಿಲ ಗ್ರಾಮ ಪಂಚಾಯತ್ ಆವರಣದಲ್ಲಿ ಪ್ರತಿಭಟನೆ ನಡೆಯಿತು.

ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಪಂಚಾಯತ್ ಅಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಆತೂರು ವಲಯಾಧ್ಯಕ್ಷ ಇಸ್ಮಾಯಿಲ್ ಆತೂರು, ಕಡಬ ಜೊತೆ ಕಾರ್ಯದರ್ಶಿ ಬಶೀರ್ ಹಲ್ಯಾರ, ಸಮಿತಿ ಸದಸ್ಯ ಶರೀಫ್. ಬಿ ಮತ್ತು ಸಮಿತಿ ಸದಸ್ಯ ಎಸ್‌. ಹಾರೀಸ್ ಕೊಯಿಲ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Scroll to Top