ಕಡಬ: ಸಾಕಲು ಅಶಕ್ತವಾದ ಗೋವುಗಳನ್ನು ಗೋಶಾಲೆಗೆ ಸಾಗಾಟ ➤ ವಿಶ್ವ ಹಿಂದೂ ಪರಿಷತ್ ಸಹಕಾರ

(ನ್ಯೂಸ್ ಕಡಬ) newskadaba.com ಕಡಬ, ಸೆ. 20. ವಿಶ್ವ ಹಿಂದೂ ಪರಿಷತ್ ಬಜರಂಗದಳ ಇದರ ಸಹಕಾರದಿಂದ ಸಾಕಲು ಶಕ್ತವಲ್ಲದ ಗೋವುಗಳನ್ನು ಗೋಶಾಲೆಗೆ ಸಾಗಾಟ ಮಾಡಲಾಯಿತು.

ಇಲ್ಲಿನ ಹಲವು ಮನೆಗಳಿಂದ ಅಶಕ್ತ ದನಗಳನ್ನು ಮಂಡ್ಯದ ಶ್ರೇಯಸ್ ಇಂಟರ್ ನ್ಯಾಶನಲ್ ಫೌಂಡೇಶನ್ ಗೋ ಶಾಲೆಗೆ ಸೇರಿಸಲಾಯಿತು. ಈ ಸಂದರ್ಭದಲ್ಲಿ ಕಡಬ ವಿ.ಹಿಂ.ಪ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ರಾಷ್ಟ್ರೀಯ ಸ್ವಯಂ ಸೇವಾ ಸಂಘ ಸುಳ್ಯ ಉದ್ಯೋಗಿ ಪ್ರಮುಖ್ ನಿತ್ಯಾನಂದ ಮೇಲ್ಮನೆ, ಸತ್ಯದೀಪು ಎಂ.ಆರ್ ಪಂಜ, ಬಜರಂಗದಳ ಸಾಪ್ತಾಹಿಕ ಮಿಲನ್ ತಿಲಕ್ ರೈ ಮೊದಲಾದವರು ಉಪಸ್ಥಿತರಿದ್ದರು.

Scroll to Top