ಶಬರಿಮಲೆ ದೇವಸ್ಥಾನದ ಬಾಗಿಲನ್ನು ‘ಕನ್ನಿಮಾಸ ಪೂಜೆಗಾಗಿ’ ಮತ್ತೆ ಓಪನ್

(ನ್ಯೂಸ್ ಕಡಬ) newskadaba.com ಶಬರಿಮಲೆ, ಸೆ.14:ಕೊರೋನಾ ಹಾವಳಿಯಿಂದಾಗಿ ಸದ್ಯದ ಮಟ್ಟಿಗೆ ಯಾವುದೇ ದೇವಲಾಯಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶವನ್ನು ಕಲ್ಪಿಸಲಾಗಿಲ್ಲ. ಬದಲಾಗಿ ಕೋವಿಡ್ ನಿಯಮಗಳಿಗನುಸಾರವಾಗಿ ಭಾಗವಹಿಸಲು ಸರ್ಕಾರ ಆದೇಶ ನೀಡಿದೆ.

 

ನಿಗಧಿತ ಸಮಯಕ್ಕಾನುಸಾರವಾಗಿ, ಹಾಗೂ ದಿನಕ್ಕೆ ಇಂತಿಷ್ಟು ಪೂಜೆಗಳಿಗೆ ಅವಕಾಶ ಎಂಬಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಅದರಂತೆ ಕನ್ಯಾಸ್ವಾಮಿಗಳ ಶ್ರೇಷ್ಟ ಹಾಗೂ ಪ್ರಸಿದ್ದ ದೇವಲಾಯವಾದ ಶಬರಿಮಲೆಗೂ ಕೋವಿಡ್ ನಿರ್ಭಂದ ಹೇರಲಾಗಿದೆ.  ‘ಕನ್ನಿಮಾಸ ಪೂಜೆಗಾಗಿ’ ಶಬರಿಮಲೆ ದೇವಸ್ಥಾನವು ಸೆ. 16 ರಂದು ಮತ್ತೆ ತೆರೆಯಲಿದೆ.

ತದನಂತರ ಎ ಕೆ ಸುಧೀರ್ ತಾಂತ್ರಿಕ ಕಂದಾರರು ರಾಜೀರು ಅವರ ಸಮ್ಮುಖದಲ್ಲಿ ದೀಪ ಬೆಳಗಿಸಲಿದ್ದಾರೆ.  ಕೊರೊನಾ ಹಿನ್ನೆಲೆಯ ಪ್ರಯುಕ್ತ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ದೇವಸ್ಥಾನದ ಎಲ್ಲಾ ಪೂಜಾ ವಿಧಿ-ವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಸೆಪ್ಟೆಂಬರ್ 21 ರಂದು ಸಂಜೆ 7.30 ರೊಳಗೆ ಶಬರಿಮಲೆಯನ್ನು ಮತ್ತೆ ಮುಚ್ಚಲಾಗುವುದು.

Also Read  ➤ತಾಯಿಗೆ ಬೆಂಕಿ ಹಚ್ಚಿದ ನಂತರ ತಂದೆಗೂ ಜೀವ ಬೆದರಿಕೆ ಹಾಕಿದ ದತ್ತು ಪುತ್ರ

 

 

error: Content is protected !!
Scroll to Top