ಟಾಲಿವುಡ್ ನ ಹಿರಿಯ ನಟ ಜಯಪ್ರಕಾಶ್ ರೆಡ್ಡಿ ವಿಧಿವಶ..!!

(ನ್ಯೂಸ್ ಕಡಬ) newskadaba.com ಹೈದರಬಾದ್  ,ಸೆ.08:  ಟಾಲಿವುಡ್ ನ ಹಿರಿಯ ನಟ ಜಯಪ್ರಕಾಶ್ ರೆಡ್ಡಿ ವಿಧಿವಶರಾಗಿದ್ದಾರೆ. ಅವರು ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು.

 

ಬಾತ್ ರೂಮ್ ನಲ್ಲಿ ಕುಸಿದು ಬಿದ್ದ ಅವರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಅವರು ಮೃತಪಟ್ಟರು. ಲಾಕ್ ಡೌನ್ ನಿಂದ ಸಿನಿಮಾ ಶೂಟಿಂಗ್ ಇಲ್ಲದ ಕಾರಣ ಅವರು ಗುಂಟೂರಿನಲ್ಲಿ ಇದ್ದರು.ಸಮರಸಿಂಹ ರೆಡ್ಡಿ, ಪ್ರೇಮಿಚುಕುಂಡಮ್ ರಾ, ನರಸಿಂಹ ನಾಯ್ಡು, ನೂವೊಸ್ತಾನಂತೆ ನೇನೊದ್ದಂತನಾ, ಜುಲಾಯಿ, ರೆಡಿ, ಕಿಕ್, ಕಬಡ್ಡಿ ಕಬಡ್ಡಿ ಮುಂತಾದ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಗಮನ ಸೆಳೆದಿದ್ದರು.

Also Read  ಕಾರು ಸ್ಫೋಟ ಪ್ರಕರಣ ➤ ಮತ್ತಿಬ್ಬರ ಬಂಧನ

 

 

error: Content is protected !!
Scroll to Top