ಪಬ್’ಜಿಗೆ ಸಡ್ಡು ಹೊಡೆದ ಫೌ-ಜಿ ಆ್ಯಪ್ ➤ ನಟ ಅಕ್ಷಯ್ ಕುಮಾರ್ ಪ್ರಚಾರ ರಾಯಭಾರಿ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.05:  ಚೀನಾದ ಪಬ್’ಜಿ ಮೊಬೈಲ್ ಆ್ಯಪ್ ನಿಷೇಧ ಆದ ಬೆನ್ನಲ್ಲೇ ಬೆಂಗಳೂರು ಮೂಲಕ ಎನ್’ಕೋರ್ ಗೇಮ್ಸ್ ಕಂಪನಿ ಫೌ-ಜಿ ಎಂಬ ಹೆಸರಿನ ಮೊಬೈಲ್ ಗೇಮ್ ವೊಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಆ್ಯಪ್’ನಲ್ಲಿ ಹೂಡಿಕೆ ಮಾಡಿದ್ದು, ಪ್ರಚಾರ ರಾಯಭಾರಿ ಆಗಿದ್ದಾರೆ.ಪಬ್ ಜಿ ರೀತಿ ಇಬ್ಬರಿಗಿಂದ ಹೆಚ್ಚಿನ ಜನರು ಆಡಬಹುದಾಗಿದ್ದು, ಈ ಆಟವನ್ನು ಭಾರತೀಯ ಭದ್ರತಾಪಡೆಗಳ ನೈಜ ಸಾಹಸಮಯ ಸನ್ನಿವೇಶವನ್ನು ಆಧರಿಸಿ ರೂಪಿಸಲಾಗಿದೆ. ಇದೇ ವೇಳೆ ಫೌ-ಜಿ ಆ್ಯಪ್ ಬಗ್ಗೆ ಟ್ವೀಟ್ ಮಾಡಿರುವ ನಟ ಅಕ್ಷಯ್ ಕುಮಾರ್, ಆತ್ಮನಿರ್ಭರ ಭಾರತ ಅಭಿಯಾನವನ್ನು ಬೆಂಬಲಿಸುವ ಆ್ಯಕ್ಷನ್ ಗೇಮ್ ಫೌ-ಜಿಯನ್ನು ಪರಿಚಯಿಸಲು ಹೆಮ್ಮೆ ಎನಿಸುತ್ತಿದೆ. ಈ ಆ್ಯಪ್’ನಿಂದ ದೊರೆಯುವ ಶೇ.20 ರಷ್ಟು ಆದಾಯವನ್ನು ಭಾರತ್ ವೀರ್ ಟ್ರಸ್ಟ್’ಗೆ ನೀಡಲಾಗುವುದು ಎಂದು ಹೇಳಿದ್ದಾರೆ.

Also Read  ಬೆಂಗಳೂರಿಗರೇ ಬೇಗ ಮನೆ ಸೇರಿಕೊಳ್ಳಿ ➤ ಇಂದೂ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ

error: Content is protected !!
Scroll to Top