10 ವರ್ಷಗಳಲ್ಲಿ 8 ಜನರನ್ನು ಮದುವೆಯಾಗಿ ವಂಚಿಸಿದ ಮಹಿಳೆ

(ನ್ಯೂಸ್ ಕಡಬ) newskadaba.com  ಉತ್ತರ ಪ್ರದೇಶ, ಸೆ. 05. ಆನ್ ಲೈನ್ ಮ್ಯಾಚಿಂಗ್ ಸೈಟ್ ಗಳನ್ನು ನೋಡಿ ಮಧ್ಯಮ ವರ್ಗದ ವರನನ್ನು ತನ್ನ ವಶಕ್ಕೆ ಹಾಕಿಕೊಳ್ಳುತ್ತಿದ್ದ ಮಹಿಳೆಯೋರ್ವಳು 10 ವರ್ಷದಲ್ಲಿ 8 ಮುದುಕರನ್ನು ಮದುವೆಯಾಗಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ ಮಹಿಳೆಯ ಬಂಧನಕ್ಕೆಇದೀಗ ಉತ್ತರ ಪ್ರದೇಶ ಪೊಲೀಸರು ಬಲೆ ಬೀಸಿದ್ದಾರೆ.

 

ಆರೋಪಿ ಮಹಿಳೆಯನ್ನು ಮೋನಿಕಾ ಎಂದು ಗುರುತಿಸಲಾಗಿದೆ. ಆಕೆ ಎಂಟನೇ ಬಾರಿಗೆ 66 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದು, ಮುದುಕರೇ ಟಾರ್ಗೆಟ್ ಆಗಿದ್ದರು ಎನ್ನಲಾಗಿದೆ. ಮುದುಕನ ಪತ್ನಿಯು ಒಂದು ವರ್ಷದ ಹಿಂದೆ ಮೃತಪಟ್ಟಿದ್ದು, ಆಕೆಯ ಸಾವಿನ ನಂತರ ಒಂಟಿಯಾಗಿದ್ದ ಇವರು ಮದುವೆ ಕೇಂದ್ರದಲ್ಲಿ ಹುಡುಗಿಯ ಹುಡುಕಾಟ ನಡೆಸಿದಾಗ ಅಲ್ಲಿ ಮೋನಿಕಾ ಸಿಕ್ಕಿದ್ದಳು. ಆತನ ಬಳಿಯಿದ್ದ 15 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿ ಪರಾರಿಯಾಗಿದ್ದ ಈಕೆ ವಿಧವೆ ಎನ್ನುತ್ತಾ ಈತನನ್ನು ನಂಬಿಸಿ ಮದುವೆಯಾಗಿದ್ದಳು. ಆದರೆ ಮದುವೆಯಾದ ಎರಡೇ ತಿಂಗಳಿಗೆ ಕಾಲ್ಕಿತ್ತಿದ್ದಳು. ಇದೀಗ ಆಕೆಯು 10 ವರ್ಷದಲ್ಲಿ 8 ಮಂದಿಯನ್ನು ಮದುವೆಯಾಗಿದ್ದಾಳೆಂಬುದು ತಿಳಿದು ಬಂದಿದೆ.

Also Read  ಪುತ್ತೂರು: ಸ್ಕೂಟರ್ ಹಾಗೂ ಲಾರಿ ನಡುವೆ ಢಿಕ್ಕಿ ➤ ಸ್ಕೂಟರ್ ಸವಾರ ಬೆಳ್ಳಾರೆ ನಿವಾಸಿ ಮೃತ್ಯು

error: Content is protected !!
Scroll to Top