ಅಕ್ರಮವಾಗಿ ಮರಳು ಸಾಗಾಟ 15 ಲೋಡ್‌ ಮರಳು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ. 05: ಕುಂಬಳೆ ಶಿರಿಯ ಪರಿಸರದಲ್ಲಿ ಅಕ್ರಮವಾಗಿ ರಾಶಿ ಹಾಕಲಾಗಿದ್ದ 15 ಲೋಡ್ ಮರಳನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

 

ಶಿರಿಯ ಸಮುದ್ರ ತೀರದಿಂದ ಮರಳನ್ನು ತಂದು ಖಾಸಗಿ ವ್ಯಕ್ತಿಯೋರ್ವರ ಹಿತ್ತಿಲಿನಲ್ಲಿ ಸಂಗ್ರಹಿಸಡಲಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸ್ ನಿಗಾ ಕಡಿಮೆಯಾಗುತ್ತಿದ್ದಂತೆ ಅಕ್ರಮ ಮರಳು ಜಾಲ ಸಕ್ರಿಯವಾಗಿತ್ತು. ಕಳೆದ ಒಂದು ತಿಂಗಳಿನಿಂದ ಮಂಜೇಶ್ವರ ಹಾಗೂ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ಐದಕ್ಕೂ ಅಧಿಕ ಸ್ಥಳಗಳಿಂದ ಅಕ್ರಮ ಮರಳು ದಾಸ್ತಾನು ಪತ್ತೆ ಹಚ್ಚಲಾಗಿತ್ತು. ಹಗಲು ಮರಳು ಸಂಗ್ರಹಿಸಿ ರಾತ್ರಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

Also Read  8 ತಿಂಗಳ ಕಂದಮ್ಮನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಕ್ರೂರಿ ತಾಯಿ..! ➤ "ಮಗುವಲ್ಲ ಕುರಿ" ಎಂದು ಕೊಲೆಗೈದಳು..‼️

 

 

error: Content is protected !!
Scroll to Top