ಬೆಂಗಳೂರಿನ ಏರ್ ಪೋರ್ಟ್ ನಲ್ಲಿ 8 ಕೆ.ಜಿ ಗಾಂಜಾ ಜಪ್ತಿ

(ನ್ಯೂಸ್ ಕಡಬ) newskadaba.com ಬೆಂಗಳೂರು. ಸೆ.03:  ಬೆಂಗಳೂರಿನ ಅಂತಾರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಸುಮಾರು 8 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 

ಮುಂಬೈಯಲ್ಲಿ ಎನ್ ಸಿ ಬಿ ಯಿಂದ ಅರೆಸ್ಟ್ ಆಗಿರುವ ಗಾಂಜಾ ಪೆಡ್ಲರ್ ಎಫ್.ಅಹಮ್ಮದ್ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಕೋಟ್ಯಾಂತರ ಮೌಲ್ಯದ ಗಾಂಜಾ ಪತ್ತೆ ಯಾಗಿದೆ. ಕೊರಿಯರ್ ಮೂಲಕ ವಿದೇಶದಿಂದ ಬೆಂಗಳೂರಿಗೆ ಗಾಂಜಾ ರವಾನೆಯಾಗಿದೆ ಎಂದು ಮಾಹಿತಿ ಲಭಿಸಿದೆ. ಕೊರಿಯರ್ ವಿಭಾಗದಲ್ಲಿ ಪರಿಶೀಲನೆ ನಡೆಸಿದಾಗ 4 ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಅಡಗಿಸಿಟ್ಟಿದ್ದ 8 ಕೆ.ಜಿ.ಗಾಂಜಾ ಪತ್ತೆಯಾಗಿದೆ. ಇದರ ಮೌಲ್ಯ 1.28 ಕೋಟಿ ರೂ. ಎಂದು ತಿಳಿದುಬಂದಿದೆ.

Also Read  ಕಳ್ಳತನ ಪ್ರಕರಣ- ಸೊತ್ತು ಸಹಿತ ಆರೋಪಿ ವಶಕ್ಕೆ

 

error: Content is protected !!
Scroll to Top