(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 03 : ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್‌ಸೈಟ್‌ಗೆ ಲಿಂಕ್ ಆಗಿರುವ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದನ್ನು ಇಂದು (ಗುರುವಾರ) ಟ್ವಿಟರ್ ಖಚಿತ ಪಡಿಸಿದೆ. ಪರಿಹಾರ ನಿಧಿಗೆ ಕ್ರಿಪ್ಟೊಕರೆನ್ಸಿಗಳ ಮೂಲಕ ಸಹಾಯ ಮಾಡುವಂತೆ ಸರಣಿ ಟ್ವೀಟ್‌ಗಳ ಮೂಲಕ ಪ್ರಧಾನಿ ಮೋದಿ ವೆಬ್‌ಸೈಟ್ ಖಾತೆಯಿಂದ ಮನವಿ ಪ್ರಕಟಗೊಂಡಿದೆ.
ಮೋದಿ ಅವರ ವೆಬ್‌ಸೈಟ್ ಖಾತೆಯ ಮೂಲಕ ನಡೆಯುತ್ತಿರುವ ಚಟುವಟಿಕೆಗಳ ಬಗೆಗೆ ಗಮನವಿದ್ದು, ಅದನ್ನು ಸುರಕ್ಷಿತಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಟ್ವಿಟರ್ ಹೇಳಿದೆ. ಈ ಖಾತೆಯಿಂದ ಹ್ಯಾಕರ್ ಗಳು ಬಿಟ್ ಕಾಯಿನ್ ದೇಣಿಗೆ ನೀಡುವಂತೆ ಕೋರಿ ಹಲವು ಟ್ವೀಟ್ ಗಳನ್ನು ಮಾಡಿದ್ದಾರೆ. ಅದಲ್ಲದೆ ಈ ಟ್ವಿಟ್ಟರ್ ಖಾತೆ ಜಾನ್ ವಿಕ್ ಎಂಬಾತನಿಂದ ಹ್ಯಾಕ್ ಮಾಡಲಾಗಿದೆ ಎಂದೂ ಟ್ವೀಟ್ ಮಾಡಲಾಗಿದೆ.ಪ್ರಧಾನಿ ನರೇಂದ್ರ ಮೋದಿಯರ ವೈಯಕ್ತಿಕ ವೆಬ್ ಸೈಟ್ ಗೆ ಲಿಂಕ್ ಆಗಿರುವ ಈ ಟ್ವಿಟ್ಟರ್ ಖಾತೆ ಸುಮಾರು 2.5 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದೆ. ಪ್ರಧಾನಿ ಮೋದಿ ಅವರ ವೈಯಕ್ತಿಕ ಟ್ವಿಟರ್ ಖಾತೆಯ ಮೇಲೆ ಇದರಿಂದ ಯಾವುದೇ ಪರಿಣಾಮ ಉಂಟಾಗಿಲ್ಲ. ಆ ಖಾತೆಯನ್ನು 6.1 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ.