(ನ್ಯೂಸ್ ಕಡಬ) newskadaba.com ಹೈದರಾಬಾದ್, ಸೆ.18, ಮಹಿಳೆಯರ ರಕ್ಷಣೆಗೆಂದು 18 ವರ್ಷದ ಯುವಕನೊಬ್ಬ ವಿನೂತನವಾದ ಚಪ್ಪಲಿಯೊಂದನ್ನು ತಯಾರಿಸಿದ್ದಾನೆ.
ಹೈದರಾಬಾದ್ ನ ಹಿಮಾಯತ್ ನಗರದ ಸಿದ್ದಾರ್ಥ್ ಮಂಡಲ ಎಂಬ ಯುವಕ ಈ ವಿಶೇಷ ಚಪ್ಪಲಿಯನ್ನು ತಯಾರಿಸಿದ್ದಾನೆ.
ಈತ ಉದ್ಯಮಿ ಶ್ರೀರಾಮ್ ಮಂಡಲ ಹಾಗೂ ಶಶಿಕಲಾ ಮಂಡಲ ಅವರ ಪುತ್ರ.
ಮಹಿಳೆಯರ ರಕ್ಷಣೆಗೆಂದು ತಯಾರಿಸಿದ ಈ ಶೂ ನ ವಿಶೇಷತೆ ಏನಂತಿರಾ..???
ಹೌದು ಈ ಶೂ ಅಥವಾ ಚಪ್ಪಲಿ ಧರಿಸಿದ್ದ ವೇಳೆ ಯಾರಾದ್ರೂ ನಿಮ್ಮ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದರೆ ನೇರವಾಗಿ ಮಹಿಳೆಯ ಅಥವಾ ಯುವತಿಯ ಕುಟುಂಬರಿಗೆ ಹಾಗೂ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಗುತ್ತದೆ. ಅಲ್ಲದೇ ಅಸಭ್ಯವಾಗಿ ವರ್ತಿಸಿದ ವೇಳೆ ಅವರಿಗೆ ಒಂದು ಒದೆ ಕೊಟ್ಟಲ್ಲಿ ಅವರು ಶಾಕ್ ಗೆ ಒಳಗಾಗುತ್ತಾರೆ.
2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಈ ವೇಳೆ ಸಿದ್ದಾರ್ಥ್ ಗೆ 12ರ ಹರೆಯ. ಘಟನೆಯಿಂದ ಚಿಂತೆಗೀಡಾದ ಬಾಲಕ ಸಿದ್ದಾರ್ಥ್ ಮಹಿಳೆಯರ ರಕ್ಷಣೆಗೆ ಕೊಡುಗೆ ನೀಡಬೇಕೆಂದು ಪಟ್ಟು ಹಿಡಿದಿದ್ದನು.
ಅಂದಿನ ಛಲವೇ ಇಂದು ಈತ ಈ ಶೂ ತಯಾರು ಮಾಡುವಲ್ಲಿ ಯಶಸ್ವಿಯಾಗಿದ್ದು, ಇದರಿಂದ ಯುವತಿಯರಿಗೆ ಅಥವಾ ಮಹಿಳೆಯರಿಗೆ ಯಾರಾದ್ರೂ ಕಿರುಕುಳ ನೀಡಿದ್ರೆ ಎಲೆಕ್ಟ್ರಿಕ್ ಶಾಕ್ ಹೊಡೆಯುತ್ತೆ ಅಂತ ಸಿದ್ದಾರ್ಥ್ ಹೇಳಿದ್ದಾನೆ.
ಪ್ರತೀ ದಿನ ಮಹಿಳೆಯರು ತನ್ನ ಕೈಲಿ ಹಿಡಿದುಕೊಂಡು ಹೋಗುವಂತಹ ವಸ್ತುನ್ನು ತಯಾರು ಮಾಡುವ ಪ್ಲಾನ್ ಹೊಳೆದಿತ್ತಾದರೂ ಆದ್ರೆ ಎಲ್ಲಾ ಸಮಯದಲ್ಲೂ ಇದು ಕಷ್ಟ ಸಾಧ್ಯವೆಂದು ಅವನು ಅರಿತ. ಕೆಲವೊಂದು ಕೆಲಸದ ಒತ್ತಡದ ವೇಳೆ ರಕ್ಷಣೆಯ ವಸ್ತುಗಳನ್ನು ಕೊಂಡೊಯ್ಯಲು ಮರೆಯಬಾರದು ಎನ್ನುವ ಉದ್ಧೇಶದಿಂದ ಈತ ಚಪ್ಪಲಿ ಅಥವಾ ಶೂ ತಯಾರಿಸಬಹುದೆಂದು ಯೋಚಿಸಿ ಅದ್ರ ನಕಲಿಯನ್ನು ತಯಾರಿಸಿದ್ದಾನೆ.
ಈಗ ನಾನು ಸಾಧನದ ಮಾದರಿಯನ್ನು ತಯಾರಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಪಡಿಸುತ್ತೇನೆ. ಒಟ್ಟಿನಲ್ಲಿ ಮಹಿಳೆಯ ರಕ್ಷಣೆಗಾಗಿ ಒಂದು ಚಪ್ಪಲಿ ಅಥವಾ ಶೂ ತಯಾರಿಸಲು ಎರಡು ವರ್ಷ ಬೇಕಾಯಿತು. ಈ ಮಧ್ಯೆ ಓದಿನ ಕಡೆಗೂ ಸ್ವಲ್ಪ ಗಮನಹರಿಸಬೇಕಾಯಿತು ಅಂತ ಸಿದ್ದಾರ್ಥ್ ಹೇಳಿದ್ದಾನೆ.