ಇನ್ಫೋಸಿಸ್‍ ನಾರಾಯಣಮೂರ್ತಿಗೆರವರಿಗೆ ವಿಶ್ವ ಡಿಜಿಟಲ್ ಅವಾರ್ಡ್

(ನ್ಯೂಸ್ ಕಡಬ) newskadaba.com ನವದೆಹಲಿ. ಸೆ.02:  ಪ್ರಥಮ ಬಾರಿಗೆ ನೀಡಲಾಗುತ್ತಿರುವ ವಿಶ್ವ ಡಿಜಿಟಲ್ ಅವಾರ್ಡ್‍ಗೆ ಇನ್ಫೋಸಿಸ್‍ನ ನಾರಾಯಣಮೂರ್ತಿ, ರತನ್ ಟಾಟಾ , ಮುಖೇಶ್ ಅಂಬಾನಿ ಹಾಗೂ ಆನಂದ್ ಮಹೀಂದ್ರಾ ಅವರು ಭಾಜನರಾಗಿದ್ದಾರೆ. ಐಎಎ ಸಂಸ್ಥೆ ಘೋಷಣೆ ಮಾಡಿರುವ ವಿಶ್ವ ಡಿಜಿಟಲ್ ಅವಾರ್ಡ್‍ನಲ್ಲಿ ಜೀವ ಮಾನ ಸಾಧನೆಗಾಗಿ ಈ ನಾಲ್ವರು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

 

ಅದೇ ರೀತಿ ಇತರ ವಿಭಾಗಗಳಲ್ಲಿ ಮಹತ್ತರ ಸಾಧನೆ ಮಾಡಿರುವ ಸಾಧಕರಿಗೂ ಡಿಜಿಟಲ್ ಪ್ರಶಸ್ತಿ ನೀಡಲಾಗಿದೆ. ಕೊರೊನಾ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ ಖ್ಯಾತ ಬಾಲಿವುಡ್ ನಟ ಸೋನು ಸೂದ್, ವಿಜಯ್ ಶೇಖರ್ ಶರ್ಮ, ರಿತೇಶ್ ಅಗರ್‍ವಾಲ್, ಅಶೋಕ್ ಕಠಾರಿಯಾ ಮತ್ತಿತರರು ಡಿಜಿಟಲ್ ಅವಾರ್ಡ್‍ಗೆ ಭಾಜನರಾಗಿದ್ದಾರೆ. ಹೆಲ್ತ್ ಕೇರ್ ವಿಭಾಗದಲ್ಲಿ ಮಣಿಪಾಲ್ ಗ್ರೂಪ್‍ನ ಸಲಹೆಗಾರ ಮೋಹನದಾಸ್ ಪೈಮತ್ತಿತರರು ಪ್ರಶಸ್ತಿ ಪಡೆದುಕೊಂಡಿದ್ದಾರೆ.

Also Read  ಕೊಳ್ನಾಡು: ರಬ್ಬರ್‌ ತೋಟದಲ್ಲಿ ಕೆಲಸಕ್ಕಿದ್ದ ಕೇರಳ ಮೂಲದ ವ್ಯಕ್ತಿ ಆತ್ಮಹತ್ಯೆ

 

error: Content is protected !!
Scroll to Top