ಮಾಜಿ ರಾಷ್ಟ್ರಪತಿ ಪ್ರಣಬ್ ಪುತ್ರಿಯಿಂದ ಭಾವೋದ್ವೇಗದ ಟ್ವೀಟ್

(ನ್ಯೂಸ್ ಕಡಬ) newskadaba.com  ನವದೆಹಲಿ. ಸೆ.01: ಕಳೆದ ದಿನ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರ ನಿಧನದಿಂದಾಗಿ ಇಡೀ ದೇಶ ದುಃಖದಲ್ಲಿ ಮುಳುಗಿ ಹೋಗಿದೆ. ಪ್ರಣಬ್ ಮುಖರ್ಜಿ ನಿಧನಕ್ಕೆ ನಾನಾ ವಲಯಗಳ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ತಂದೆಯ ಮರಣದಿಂದ ಶೋಕಸಾಗರದಲ್ಲಿ ಮುಳುಗಿರುವ ಅವರ ಪುತ್ರಿ ಶರ್ಮಿಷ್ಟ ಮುಖರ್ಜಿ ಭಾವೋದ್ವೇಗದಿಂದ ಟ್ವೀಟ್ ಮಾಡಿದ್ದಾರೆ.ಎಲ್ಲರಿಗೂ ಧನ್ಯವಾದ ಎಂದು ಟ್ವೀಟ್ ಆರಂಭಿಸಿರುವ ಶರ್ಮಿಷ್ಟ ಅಪ್ಪ ಎಲ್ಲರೂ ನಿಮಗೆ ಅಂತಿಮ ವಿದಾಯ ಸಲ್ಲಿಸಲು ನಿಮ್ಮ ಅಚ್ಚುಮೆಚ್ಚಿನ ಕವಿಯ ಸಾಲುಗಳನ್ನು ಉಲ್ಲೇಖಿಸುವ ಸ್ವತಂತ್ರ ಪಡೆದುಕೊಳ್ಳುತ್ತೇನೆ.

Also Read  ಬಸ್​​ ಗಳಲ್ಲಿ ನೂಕುನುಗ್ಗಲಿನಿಂದ ಅನಾಹುತ ಸಂಭವಿಸಿದರೆ ಆರ್​.ಅಶೋಕ್ ಹೊಣೆ ➤ ಕಾಂಗ್ರೆಸ್

ದೇಶ ಸೇವೆಯಲ್ಲಿ, ಜನರ ಸೇವೆಯಲ್ಲಿ ನೀವು ಸಂಪೂರ್ಣವಾಗಿ ಆರ್ಥಪೂರ್ಣವಾಗಿ ಜೀವನ ನಡೆಸಿದಿರಿ. ನಿಮ್ಮ ಮಗಳಾಗಿ ಜನಿಸಿದ್ದು ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ ಎಂದು ನುಡಿದಿದ್ದಾರೆ. ಇನ್ನೂ ಆರ್ಮಿ ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಪ್ರಣಬ್ ಮುಖರ್ಜಿ ಸೋಮವಾರ ಸಂಜೆ ಕೊನೆ ಉಸಿರೆಳೆದರು. ಕೋವಿಡ್ ಸೋಂಕಿನ ಜತೆಗೆ ಇತರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

error: Content is protected !!
Scroll to Top