ಕೊರೋನಾ ಸೋಂಕಿತ ವೃದ್ದನನ್ನು ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ಗೆ ತಾನೇ ಚಾಲಕನಾದ ವೈದ್ಯ

(ನ್ಯೂಸ್ ಕಡಬ) newskadaba.com ಪುಣೆ, . 28. ಅನಾರೋಗ್ಯದಿಂದ ಬಳಲುತ್ತಿದ್ದ ಕೊರೋನಾ ಸೋಂಕಿತ ವೃದ್ದನನ್ನು ಆಸ್ಪತ್ರೆಗೆ ದಾಖಲಿಸಲು ವೈದ್ಯರೇ ಆಂಬುಲೆನ್ಸ್‌ ಚಲಾಯಿಸಿದ ಘಟನೆ ಪುಣೆಯಲ್ಲಿ ನಡೆದಿದೆ.

ಆಂಬುಲೆನ್ಸ್‌ ಚಾಲಕನಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಕೊರೊನಾ ಸೋಂಕಿತ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಲು ಯಾರೂ ಇರಲಿಲ್ಲ. ಈ ಸಂದರ್ಭ ತುರ್ತು ಚಿಕಿತ್ಸೆಯ ಅನಿವಾರ್ಯತೆಯನ್ನು ಮನಗಂಡ ವೈದ್ಯ ರಂಜಿತ್ ನಿಕಮ್ ಅವರು ಕೂಡಲೇ ತಾವೇ ಸ್ವತಃ ಆಂಬುಲೆನ್ಸ್‌ ಚಲಾಯಿಸಲು ಮುಂದಾಗಿದ್ದಾರೆ.

error: Content is protected !!
Scroll to Top