ಇಂದು ಮತ್ತೆ ಇಳಿಕೆ ಕಂಡ “ಚಿನ್ನ ಧಾರಣೆ”

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 27.  ಇಂದು ದೇಶೀಯ  ಮಾರುಕಟ್ಟೆಯಲ್ಲಿ ಚಿನ್ನದ  ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಎಂಸಿಎಕ್ಸ್ ನಲ್ಲಿ ಅಕ್ಟೋಬರ್ ಚಿನ್ನದ ಭವಿಷ್ಯವು ಶೇಕಡಾ 0.22 ರಷ್ಟು ಇಳಿದಿದ್ದು, 10 ಗ್ರಾಂ. ಬಂಗಾರದ ಬೆಲೆಯು 51,665 ಕ್ಕೆ ತಲುಪಿದೆ. ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ಶೇಕಡಾ 1 ರಷ್ಟು ಇಳಿಕೆ ಕಂಡಿದ್ದು, ಕೆ.ಜಿಗೆ 66,821 ರೂಪಾಯಿಯಾಗಿದೆ.

ಗುರುವಾರ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 54,870 ರೂಪಾಯಿಗಳಿಂದ  54,380 ರೂಪಾಯಿಗೆ ಇಳಿದಿದೆ. ಬೆಳ್ಳಿ ಕೆ.ಜಿ.ಗೆ 65,500 ರೂಪಾಯಿಗಳಿಂದ 65,550 ರೂಪಾಯಿ ಏರಿಕೆ ಕಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 49,850 ರೂಪಾಯಿಯಾಗಿದೆ. ಜಾಗತಿಕ ಮಾರುಕಟ್ಟೆಯು ದುರ್ಬಲವಾಗಿರುವುದು ಹಾಗೂ ರೂಪಾಯಿ ಬೆಲೆಯಲ್ಲಿ ಏರಿಳಿತವು ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ. ದೆಹಲಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 210 ರೂಪಾಯಿ ಇಳಿಕೆ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 1,918 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ ಬೆಲೆ 26.45 ಡಾಲರ್ ಪ್ರತಿ ಔನ್ಸ್ ಆಗಿದೆ.

Also Read  ಕೊಲ್ಕತ್ತಾ: ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣದ ತೀರ್ಪು ಇಂದು ಪ್ರಕಟ

error: Content is protected !!
Scroll to Top