ಉ.ಪ್ರ: ಗುಂಡಿಕ್ಕಿ ಪತ್ರಕರ್ತನ ಕೊಲೆ

(ನ್ಯೂಸ್ ಕಡಬ) newskadaba.com ಬಲ್ಲಿಯಾ, ಆ. 25.  ಹಿಂದಿ ಸುದ್ದಿ ವಾಹಿನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪತ್ರಕರ್ತರೋರ್ವರನ್ನು ಗುಂಡಿಟ್ಟು, ಹತ್ಯೆ ಮಾಡಿರುವ ಘಟನೆ ಸೋಮವಾರ ರಾತ್ರಿ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ರತನ್‌ ಸಿಂಗ್‌ (45) ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಇವರಿಗೆ ನೆರೆಹೊರೆಯವರೊಂದಿಗೆ ಆಸ್ತಿ ವಿವಾದವಿದ್ದು, ಈ ಸಂಬಂಧ ಇವರ ನಡುವೆ ಜಗಳ ನಡೆದು, ಈ ಸಂದರ್ಭ ರತನ್‌ ಅವರಿಗೆ ನೆರೆ ಮನೆಯವರು ಗುಂಡು ಹಾರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಆಸ್ತಿ ವಿವಾದವೇ ಈ ಕೊಲೆಗೆ ಕಾರಣ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Also Read  ಪುತ್ತೂರು: ಜ್ಯೂಸ್ ಅಂಗಡಿಯಲ್ಲಿ ಅಗ್ನಿ ಅವಘಡ ➤ ಪೊಲೀಸ್, ಗೃಹರಕ್ಷಕ ಸಿಬ್ಬಂದಿಯಿಂದ ತಪ್ಪಿದ ಅನಾಹುತ

error: Content is protected !!
Scroll to Top