ಕಿರುಕುಳ ತಡೆಯಲಾರದೆ ಯುವ ವಕೀಲ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಬಳ್ಳಾರಿ, . 25. ಸೆಲ್ಫಿ ವೀಡಿಯೋ ಮಾಡಿಕೊಂಡು ಯುವ ವಕೀಲರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಕೀಲರನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಮೂಲದ ಮಹೇಶ್ (28) ಎಂದು ಗುರುತಿಸಲಾಗಿದೆ. ಇವರು ಹೊಸಪೇಟೆಯ ಬಳ್ಳಾರಿ ಸರ್ಕಲ್‌ನಲ್ಲಿರುವ ಈಕ್ವಿಟಾಸ್‌‌‌ ಸ್ಮಾಲ್‌‌‌‌‌ ಫೈನಾನ್ಸ್‌‌‌‌ ಬ್ಯಾಂಕ್‌ನಲ್ಲಿ ಲೀಗಲ್‌‌ ಅಡ್ವೈಸರ್‌‌ ಆಗಿದ್ದರು. ಇನ್ನು ಮಹೇಶ್‌ ಮೃತಪಟ್ಟ ಸ್ಥಳದಲ್ಲಿ ಡೆತ್‌ ನೋಟ್‌ ದೊರೆತ್ತಿದ್ದು, ನನ್ನ ಸಾವಿಗೆ ಈಕ್ವಿಟಾಸ್ ಬ್ಯಾಂಕ್​ನ ಡಿ.ಡಿ.ಎಂ. ರಾಘವೇಂದ್ರ, ಜನರಲ್ ಮ್ಯಾನೇಜರ್ ರಮೇಶ್, ಬಸವರಾಜ್​, ಬ್ರಾಂಚ್ ಮ್ಯಾನೇಜರ್ ಏಕಾಂತಪ್ಪ ಅವರೇ ಕಾರಣ. ಅಧಿಕಾರಿಗಳು ದಾಖಲೆ ಸರಿ ಇಲ್ಲದಿದ್ದರೂ ಕೂಡಾ ಲೋನ್‌‌‌‌ ಕೊಡಲು ಒತ್ತಾಯಿಸುತ್ತಿದ್ದರು ಎಂದು ಮಹೇಶ್‌ ಡೆತ್‌ ನೋಟ್‌ನಲ್ಲಿ ಬರೆದಿಟ್ಟಿದ್ದಾರೆ.

Scroll to Top