ಪರಸ್ಪರ ಡಿಕ್ಕಿಯಾದ ಬೈಕುಗಳು ➤ ಗಾಯಗೊಂಡ ಸವಾರ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ. ಆ,25: ಎರಡು ಬೈಕುಗಳ ಮಧ್ಯೆ ಅಪಘಾತ ಸಂಭವಿಸಿ, ಸವಾರರಿಬ್ಬರು ಗಾಯಗೊಂಡ ಘಟನೆಯೊಂದು ಕನಕಮಜಲಿನಲ್ಲಿ ಆ.25 ರಂದು ಸಂಭವಿಸಿದೆ.

ಕನಕಮಜಲಿನ ಕುತ್ತಿಮುಂಡ ಶೇಷಪ್ಪ ಗೌಡ ಎಂಬವರು ತಮ್ಮ ಬೈಕ್‌ ನಲ್ಲಿ ದೇರ್ಕಜೆ ರಸ್ತೆಯಿಂದ ಮುಖ್ಯರಸ್ತೆ ಕಡೆಗೆ ಬರುತ್ತಿದ್ದಾಗೆ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಪ್ರಸನ್ನ ಅಡ್ಕಾರು ಎಂಬವರ ಬೈಕ್‌ ಗೆ ಢಿಕ್ಕಿ ಹೊಡೆದ ಪರಿಣಾಮದಿಂದಾಗಿ ಬೈಕ್‌ ನಿಂದ ರಸ್ತೆಗೆ ಎಸೆಯಲ್ಪಟ್ಟ ಶೇಷಪ್ಪ ಗೌಡರು ಕಾಲಿಗೆ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಅವರನ್ನು ಸ್ಥಳೀಯರು ಸೇರಿ ಜೀಪಿನಲ್ಲಿ ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

 

Scroll to Top