ಬಿಜೆಪಿ ಪಕ್ಷಕ್ಕೆ ಇಂದು ಮಾಜಿ IPS ಅಧಿಕಾರಿ ‘ಸಿಂಗಂ’ ಅಣ್ಣಾಮಲೈ ಸೇರ್ಪಡೆ

(ನ್ಯೂಸ್ ಕಡಬ) newskadaba.com ನವದೆಹಲಿ . ಆ,25:  IPS ಹುದ್ದೆಗೆ ರಾಜೀನಾಮೆ ನೀಡಿದ್ದ ಮಾಜಿ ಅಧಿಕಾರಿ ಅಣ್ಣಾಮಲೈ ಇಂದು ದೆಹಲಿಯಲ್ಲಿ (ಮಂಗಳವಾರ) ಬೆಳಿಗ್ಗೆ 11 ಗಂಟೆಗೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ಕರ್ಯಕ್ರಮ ನಡೆಯಲಿದೆ.

 

ನಾನು ಕಳೆದ ಕೆಲವು ತಿಂಗಳುಗಳಿಂದ ನನ್ನ ಆಯ್ಕೆಗಳನ್ನು ಪರಿಗಣಿಸುತ್ತಿದ್ದೆ ಆದರೆ ಅಂತಿಮವಾಗಿ ನಾನು ಬಿಜೆಪಿಗೆ ಸೇರಲು ಮತ್ತು ನನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಲು ನಿರ್ಧರಿಸಿದ್ದೇನೆ” ಎಂದು ಅಣ್ಣಾಮಲೈ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಮತ್ತು ಜನಪ್ರಿಯವಾಗಿ ‘ಸಿಂಗಂ’ ಎಂದು ಕರೆಯಲ್ಪಡುವ ಅಣ್ಣಾಮಲೈ ಅವರು 2019 ರ ಮೇ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು.

Also Read  ನಾನು ಸಲಿಂಗಕಾಮಿ ಅಲ್ಲ ಎನ್ನುತ್ತಲೇ ಕಟ್ಟಡದಿಂದ ಹಾರಿದ ವಿದ್ಯಾರ್ಥಿ

 

error: Content is protected !!
Scroll to Top