(ನ್ಯೂಸ್ ಕಡಬ) newskadaba.com ನವದೆಹಲಿ. ಆ,20: 2016ರಲ್ಲಿ ಆರಂಭವಾದ ಮೊದಲ ಸ್ವಚ್ಛತಾ ಸಮೀಕ್ಷೆಯಲ್ಲಿ ಇಡೀ ದೇಶದಲ್ಲೇ ಸ್ವಚ್ಚತಾ ನಗರ ಎಂಬ ಪ್ರಶಸ್ತಿಗೆ ಭಾಜನವಾಗಿದ್ದ ರಾಜ್ಯದ ಸಾಂಸ್ಕೃತಿಕ ನಗರ ಮತ್ತು ಮೂರನೇ ಅತಿದೊಡ್ಡ ನಗರ ಮೈಸೂರಿಗೆ ಈ ಬಾರಿ ‘ಸ್ವಚ್ಛ ನಗರ’ ಎಂಬ ಹಿರಿಮೆ ಕೈತಪ್ಪಿದೆ.
ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 2020ನೇ ಸಾಲಿನ ಸ್ವಚ್ಛತಾ ಸಮೀಕ್ಷೆ ಫಲಿತಾಂಶವನ್ನು ಪ್ರಕಟಿಸಿದ್ದು ಮಧ್ಯಪ್ರದೇಶದ ಇಂದೋರ್ ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದೆ. ಗುಜರಾತಿನ ಸೂರತ್ ಎರಡನೇ ಸ್ಥಾನ ಪಡೆದುಕೊಂಡಿದೆ. ಮಹಾರಾಷ್ಟ್ರದ ನವೀ ಮುಂಬೈ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಜನವರಿ 2016ರಲ್ಲಿ 73 ಪ್ರಮುಖ ನಗರಗಳ ನಡುವೆ ಮೊದಲ ಬಾರಿಗೆ ಸ್ವಚ್ಛತಾ ಸಮೀಕ್ಷೆ ನಡೆಸಿತ್ತು. ಆಗ ಮೈಸೂರು ಮೊದಲ ಸ್ಥಾನ ಪಡೆದಿತ್ತು.