(ನ್ಯೂಸ್ ಕಡಬ) newskadaba.com ಕಾಸರಗೋಡು, ಆ.18, ಯುವಕನನ್ನು ಕಡಿದು ಹತ್ಯೆಗೈದ ಘಟನೆ ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಮೃತರನ್ನು ನಾಯ್ಕಾಪುವಿನ ಹರೀಶ್(38) ಎಂದು ಗುರುತಿಸಲಾಗಿದೆ. ಮನೆಯಿಂದ 100 ಮೀಟರ್ ದೂರದ ದಾರಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರೀಶ್ ಎಂಬವರನ್ನು ಗಮನಿಸಿದ ಪಾದಚಾರಿಯೋರ್ವರು ತಕ್ಷಣ ಕುಂಬಳೆ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಪೊಲೀಸರು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ನಾಯ್ಕಾಪುವಿನ ಅಯಿಲ್ ಮಿಲ್‍ನಲ್ಲಿ ದುಡಿಯುತ್ತಿದ್ದ ಹರೀಶ್ ಮನೆಗೆ ತೆರಳುತಿದ್ದ ವೇಳೆ ಘಟನೆ ನಡೆದಿದೆ, ತಲೆಗೆ ಹಾಗೂ ಕುತ್ತಿಗೆಗೆ ಬಿದ್ದ ಗಂಭೀರ ಸ್ವರೂಪದ ಪೆಟ್ಟು ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ವೈಯುಕ್ಕಿಕ ದ್ವೇಷ ಈ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಕೊಲೆಯ ಕುರಿತು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
