ಆ.20ಕ್ಕೆ ಸಿಇಟಿ ಫಲಿತಾಂಶ ಪ್ರಕಟ ➤ ಉನ್ನತ ಶಿಕ್ಷಣ ಸಚಿವರಿಂದ ಸ್ಪಷ್ಟನೆ



(ನ್ಯೂಸ್‌ಕಡಬ) newskadaba.com ಬೆಂಗಳೂರು, ಆ 18:ಆ.20ಕ್ಕೆ ಸಿಇಟಿ ಫಲಿತಾಂಶ ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥ ನಾರಾಯಣ ರವರು ತಿಳಿಸಿದ್ದಾರೆ. ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ಸೀಟುಗಳ ಶುಲ್ಕ ಏರಿಕೆ ಇರುವುದಿಲ್ಲ. ಹಾಗೆಯೇ ಸೀಟು ಹಂಚಿಕೆ ಸಹ ಕಳೆದ ಸಾಲಿನಲ್ಲಿರುವಂತೆಯೇ ಮುಂದುವರೆಯಲಿದೆ ಎಂದು ಸಚಿವರು ಹೇಳಿದ್ದಾರೆ.







 


ಕಳೆದ ವರ್ಷ ಶೇ.33ರಷ್ಟು ಶುಲ್ಕ ಏರಿಕೆ ಮಾಡಲಾಗಿದ್ದು ,ಈ ಸಾಲಿನಲ್ಲಿ ಯಾವುದೇ ಶುಲ್ಕ ಏರಿಕೆಯಾಗಲಿ,ಸೀಟು ಹಂಚಿಕೆಯಾಗಲಿ ಇರುವುದಿಲ್ಲ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ. ಇದರಂತೆ ಅಕ್ಟೋಬರ್ ನಲ್ಲಿ ಕೌನ್ಸಲಿಂಗ್ ತರಭೇತಿಗಳನ್ನು ನಡೆಸಲಾಗುತ್ತದೆ ಎಂದೂ ಈ ಮೂಲಕ ತಿಳಿಸಿದ್ದಾರೆ.






 

 

error: Content is protected !!
Scroll to Top