ಕಾಸರಗೋಡು: ಅಕ್ರಮ 440 ವಿದೇಶಿ ಬಾಟಲಿಗಳ ಸಹಿತ ಆರೋಪಿ ಅರೆಸ್ಟ್

(ನ್ಯೂಸ್‌ ಕಡಬ) ಕಾಸರಗೋಡು, ಆ. 15, ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 440 ವಿದೇಶಿ ಬಾಟ್ಲಿಗಳನ್ನು ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಕೋಳಿಯಡ್ಕ ಸಮೀಪದ ರಾಮಕೃಷ್ಣ ಎಂಬವರು ತನ್ನ ಮನೆಯ ಹಿತ್ತಲಿನಲ್ಲಿ ಮೂರು ಗೋಣಿ ಚೀಲಗಳಲ್ಲಿ ಮದ್ಯವನ್ನು ತುಂಬಿಸಿಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಅಬಕಾರಿ ಇಲಾಖೆಗೆ ಲಭಿಸಿದಂತ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Also Read  ಕಲ್ಲು ಕ್ವಾರಿ ಕುಸಿದು ಮೂವರು ಕಾರ್ಮಿಕರು ಮೃತ್ಯು           

error: Content is protected !!
Scroll to Top