ಕಾಸರಗೋಡು: ಅಕ್ರಮ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಕಸ್ಟಮ್ಸ್‌ ಅಧಿಕಾರಿಗಳು

(ನ್ಯೂಸ್‌ ಕಡಬ) ಕಾಸರಗೋಡು, ಆ. 13, ಅಕ್ರಮವಾಗಿ ಕದ್ದೊಯ್ಯುತ್ತಿದ್ದ ಸುಮಾರು 45 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಣ್ಣೂರು ವಿಮಾನ ನಿಲ್ದಾಣದಿಂದ ವಶಪಡಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು, ಮಂಜೇಶ್ವರ ನಿವಾಸಿಗಳಾದ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಜೇಶ್ವರದ ಸತ್ತಾರ್ ಹಾಗೂ ಸಮೀರ್ ಎಂದು ಗುರುತಿಸಲಾಗಿದೆ. ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಅಕ್ರಮ ಚಿನ್ನಾಭರಣಗಳ ಸಾಗಾಟ ಹೆಚ್ಚುತ್ತಿರುವ ಹಿನ್ನಲೆಯಿಂದ ಕಸ್ಟಮ್ಸ್  ಅಧಿಕಾರಿಗಳು ತಪಾಸಣೆಯನ್ನು ತೀವ್ರಗೊಳಿಸಿದ್ದು , ಆಗಸ್ಟ್ 6 ರಂದು ದುಬೈ ನಿಂದ ಬಂದಿದ್ದ ಇಬ್ಬರು ಕಾಸರಗೋಡು ನಿವಾಸಿಗಳಿಂದ 56 ಲಕ್ಷ ರೂ . ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

Also Read  ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ➤ ಆರೋಪಿ ಗೋಣಿಬೀಡು ಪೊಲೀಸ್ ಠಾಣಾ ಎಸ್ಐ ಅಮಾನತು

error: Content is protected !!
Scroll to Top