ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಎನ್​ಕೌಂಟರ್ ➤ ಓರ್ವ ಯೋಧ ಹುತಾತ್ಮ

(ನ್ಯೂಸ್ ಕಡಬ) newskadaba.com ಪುಲ್ವಾಮಾ, ಆ,12: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಮ್ರಾಜಿಪೋರಾದ ಸೇಬಿನ ತೋಟದಲ್ಲಿ ಇಂದು ಬೆಳಗ್ಗೆ ಭದ್ರತಾ ಸಿಬ್ಬಂದಿ ಹಾಗೂ ಭಯೋತ್ಪಾದಕರ ನಡುವೆ ಎನ್​​ಕೌಂಟರ್​ ನಡೆದಿದೆ.

 

ಈ ಘಟನೆಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮನಾಗಿದ್ದು, ಮತ್ತೊಬ್ಬ ಯೋಧ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಗಾಯಗೊಂಡ ಯೋಧನಿಗೆ ಶ್ರೀನಗರದ ಆರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಇನ್ನು, ಎನ್​ಕೌಂಟರ್ ವೇಳೆ ಇಬ್ಬರು ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಮ್ರಾಜಿಪೋರಾ ಪ್ರದೇಶವನ್ನು ಸುತ್ತುವರಿಯಲಾಗಿದೆ.ಪುಲ್ವಾಮಾದ ತೋಕರ್​ಪೋರಾ ಪ್ರದೇಶದಲ್ಲೂ ಸಹ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ದಿಲ್ಲಿ ಹಿಂಸಾಚಾರ: ಮೃತರ ಸಂಖ್ಯೆ 21ಕ್ಕೇರಿಕೆ

 

 

error: Content is protected !!
Scroll to Top