ಜೂನಿಯರ್ ಸ್ಟೈನ್ ಖ್ಯಾತಿಯ ಮುಂಬೈ ಕ್ರಿಕೆಟ್ ಆಟಗಾರ ನೇಣಿಗೆ ಶರಣು

(ನ್ಯೂಸ್ ಕಡಬ) newskadaba.com, ಮುಂಬೈ, ಆ. 12, ದಕ್ಷಿಣ ಆಫ್ರಿಕಾದ ಸ್ಟಾರ್ ವೇಗಿ ಡೇಲ್ ಸ್ಟೈನ್ ಅವರನ್ನು ಹೋಲುವ ಬೌಲಿಂಗ್ ಶೈಲಿ ಹೊಂದಿದ್ದ ಕಾರಣದಿಂದಾಗಿ ‘ಜೂನಿಯರ್ ಸ್ಟೈನ್’ ಎಂದೇ ಸ್ಥಳೀಯ ಕ್ರಿಕೆಟ್ನಲ್ಲಿ ಕರೆಸಿಕೊಳ್ಳುತ್ತಿದ್ದ ಮುಂಬೈನ ಕ್ಲಬ್ ಕ್ರಿಕೆಟಿಗ ಕರಣ್ ತಿವಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಐಪಿಎಲ್ ತಂಡಗಳನ್ನು ಪ್ರತಿನಿಧಿಸುವ ಅವಕಾಶ ಕೈತಪ್ಪಿ ಹೋದದ್ದೇ ಅವರ ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
27 ವರ್ಷದ ಕರಣ್ ತಿವಾರಿ ಐಪಿಎಲ್ ತಂಡಗಳಲ್ಲಿ ಅವಕಾಶ ಸಿಗದ ಕಾರಣದಿಂದಾಗಿ ಮಲಡ್ (ಈಸ್ಟ್) ನಿವಾಸದಲ್ಲಿ ನೇಣುಬಿಗಿದುಕೊಂಡು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

Also Read  ವಾಯುಭಾರ ಕುಸಿತ- ಭಾರೀ ಮಳೆ ಸಾಧ್ಯತೆ


ಕರಣ್ ಆತ್ಮಹತ್ಯೆಯ ನಿರ್ಧಾರದ ಬಗ್ಗೆ ಉದಯ್ಪುರದಲ್ಲಿನ ತನ್ನ ಆತ್ಮೀಯ ಗೆಳೆಯನಿಗೆ ಮಾಹಿತಿ ನೀಡಿದ್ದರ ಬೆನ್ನಲ್ಲೇ ಆತನು ಮುಂಬೈನಲ್ಲೇ ಇರುವ ಕರಣ್ ಅವರ ಸಹೋದರಿಗೆ ಮಾಹಿತಿ ನೀಡಿದ್ದ. ಸಹೋದರಿ ತಾಯಿಗೆ ಕರೆ ಮಾಡಿ ಸುದ್ದಿ ತಿಳಿಸಿದರೂ ಬಹಳಷ್ಟು ತಡವಾಗಿತ್ತು. ಕುಟುಂಬದವರು ಕರಣ್ ಕೋಣೆಯ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಅವರು ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮೊದಲೇ ಅವರು ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ.

error: Content is protected !!
Scroll to Top