ಪೆರ್ನೆಮ್ ಸುರಂಗದ ಗೋಡೆ ಕುಸಿತ➤ಕೊಂಕನ್ ರೈಲ್ವೆ ಸಂಚಾರ ಸ್ಥಗಿತ

(ನ್ಯೂಸ್ ಕಡಬ) newskadaba.com ಮಂಗಳೂರು: ಆ.07., ಭಾರಿ ಮಳೆಯಿಂದಾಗಿ ಗೋವಾದ ಪೆರ್ನೆಮ್‌ನಲ್ಲಿ ಸುರಂಗ ಗೋಡೆಯ ಒಂದು ಭಾಗ ಕುಸಿದ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವ ಕೊಂಕಣ್ ರೈಲ್ವೆ ಎಲ್ಲಾ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಉತ್ತರ ಗೋವಾ ಜಿಲ್ಲೆಯ ಪೆರ್ನೆಮ್‌ನಲ್ಲಿ ಸುರಂಗದೊಳಗಿನ ಗೋಡೆಯ ಐದು ಮೀಟರ್ ಭಾಗ ಗುರುವಾರ ಮುಂಜಾನೆ 2.50 ರ ಸುಮಾರಿಗೆ ಕುಸಿದಿದೆ.  ಇದೀಗ ರೈಲ್ವೆ ಹಳಿ ಮೇಲೆ ಸುರಿದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕುಸಿದ ಗೋಡೆಯ ದುರಸ್ಥಿ ಪ್ರಗತಿಯಲ್ಲಿದೆ. ಮುಂದಿನ ಸೂಚನೆ ತನಕ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

Also Read  ಮಕ್ಕಳಿಗೆ 'ನೋ-ಡಿಟೆನ್ಷನ್' ನೀತಿ ರದ್ದು: ತಜ್ಞರ ವಿರೋಧ

ಕಳೆದ ಐದು ದಿನಗಳಿಂದ ಗೋವಾದಲ್ಲಿ ನಿರಂತರ ಮಳೆಯಾಗುತ್ತಿದೆ ಮತ್ತು ಕೆಲವು ತಗ್ಗು ಪ್ರದೇಶಗಳು ಪ್ರವಾಹದಂತಹ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಪ್ರಯಾಣಿಕರು ಹೆಚ್ಚಿನ ಮಾಹಿತಿಗೆ 022 27587939, 10722 ಸಂಪರ್ಕಿಸಬಹುದು ಎಂದು ಕೊಂಕಣ ರೈಲ್ವೆ ಮಂಗಳೂರು ವಿಭಾಗ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top