ಸಸಿಹಿತ್ಲು ವರುಣನ ಅವಾಂತರಕ್ಕೆ ಧರೆಗುರುಳಿದ ವಿದ್ಯುತ್ ಕಂಬಗಳು

(ನ್ಯೂಸ್ ಕಡಬ) newskadaba.com.ಸಸಿಹಿತ್ಲು,ಆ.3: ವರುಣನ ಅವಾಂತರಕ್ಕೆ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಕೆರೆಯ ಬಳಿಯ ಖಾಸಗಿ ಜಮೀನಿನ ತೆಂಗಿನ ಮರವೊಂದು ತುಂಡಾಗಿ ಬಿದ್ದು ಮೂರು ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ದೇವಳದ ಗೋಪಾಲ ಪಾತ್ರಿ ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ನಾರಾಯಣ ಕರ್ಕೇರ ಇವರು ಕೂಡಲೇ ಮುಕ್ಕ ಶಾಖೆಯ ಮೆಸ್ಕಾಂ ಇಲಾಖೆಗೆ ದೂರವಾಣಿ ಮೂಲಕ ದೂರು ನೀಡಿದ್ದರಿಂದ ಇಲಾಖೆಯ ಸಿಬ್ಬಂದಿಗಳು ಕೂಡಲೇ ಆಗಮಿಸಿ ತುರ್ತು ಕಾಮಗಾರಿಯನ್ನು ನಡೆಸಿದ್ದಾರೆ.ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ.

Scroll to Top