ಮೀನು ಮುಟ್ಟಿದ ಬಳಿಕ ಕೈ ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿ ➤ ವೈದ್ಯರ ಮಾತು ಕೇಳಿ ಕುಸಿದುಬಿದ್ದ!

(ನ್ಯೂಸ್ ಕಡಬ) newskadaba.com ಬೀಜಿಂಗ್​,ಆ.01:  ಇಡೀ ವಿಶ್ವದಲ್ಲಿ ಮೀನು ಮಾಂಸ ಪ್ರಿಯರೇನು ಕಮ್ಮಿ ಇಲ್ಲ. ಜಗತ್ತಿನೆಲ್ಲೆಡೆ ಮೀನು ಉತ್ಪಾದನೆಯೇ ಒಂದು ಪ್ರಮುಖ ಆರ್ಥಿಕತೆಯ ಭಾಗವಾಗಿದೆ. ಮೀನು ಮಾಂಸದಲ್ಲಿ ರುಚಿಯ ಜತೆಗೆ ಆರೋಗ್ಯ ವೃದ್ಧಿಕಾರಕ ಅಂಶಗಳಿರುವುದು ಎಷ್ಟು ನಿಜವೋ? ಅಷ್ಟೇ ಅಪಾಯಾಕಾರಿ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಮೀನಿನ ಮೂಳೆಗಳಿಂದ ಕೈಗೆ ಚುಚ್ಚಿಸಿಕೊಂಡ ಚೀನಾದ ವ್ಯಕ್ತಿಯೊಬ್ಬನಿಗೆ ಗಂಭೀರವಾದ ಉರಿಯೂತ ಕಾಣಿಸಿಕೊಂಡಿದ್ದು, ಇದೀಗ ಆತನ ಕೈಯನ್ನು ಕತ್ತರಿಸಬೇಕಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಚೀನಾದ 60 ವರ್ಷದ ಸಮುದ್ರ ಆಹಾರ ಪ್ರಿಯನೊಬ್ಬ ಇತ್ತೀಚೆಗೆ ಮೀನನ್ನು ಮನೆಗೆ ತಂದಿದ್ದ. ಯಾವುದೇ ಗ್ಲೌಸ್​ ಧರಿಸದೇ ಬರಿಗೈಯಿಂದ ಮೀನನ್ನು ಕತ್ತರಿಸುವಾಗ ಆತನ ಕೈ ಬೆರಳುಗಳಿಗೆ ಮೂಳೆಗಳು ಚುಚ್ಚಿದ್ದವು. ಇದರಿಂದ ರಕ್ತವಾಗಲಿ ಅಥವಾ ಕಾಣುವಂತಹ ಗಾಯವಾಗಲಿ ಆಗಿರಲಿಲ್ಲ. ಕೆಲ ದಿನಗಳಲ್ಲಿ ನೋವು ಕಾಣಿಸಿಕೊಂಡು ವೈದ್ಯರ ಬಳಿ ಹೋದಾಗ ಆತ ಅಕ್ಷರಶಃ ಶಾಕ್​ ಆಗಿದ್ದಾನೆ. ಆತನ ಕೈಗೆ ಮಾರಕ ಬ್ಯಾಕ್ಟೀರಿಯಾ ಸೋಂಕು ತಗುಲಿರುವುದು ಗೊತ್ತಾಗಿದೆ. ಇಂತಹ ಬ್ಯಾಕ್ಟಿರಿಯಾಗಳು ಸಾಮಾನ್ಯವಾಗಿ ಬೆಚ್ಚನೆಯ ಸಮುದ್ರ ನೀರಿನಲ್ಲಿ ಜೀವಿಸುತ್ತವೆ ಮತ್ತು ಮಾಂಸವನ್ನು ತಿನ್ನುವ ಬ್ಯಾಕ್ಟೀರಿಯಾಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ. ಚೀನಾ ವ್ಯಕ್ತಿಗೆ ವೈದ್ಯರು ತಕ್ಷಣ ಚಿಕಿತ್ಸೆಯನ್ನು ನೀಡಿದ್ದಾರೆ. ಆದರೂ, ಆತನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವುದರಿಂದ ಕೈಯನ್ನು ಕತ್ತರಿಸಬೇಕಾಗುತ್ತದೆ ಎಂದು ಚೀನಾದ ವೈದ್ಯರು ಹೇಳಿದ್ದಾರೆ.

 

 

error: Content is protected !!

Join the Group

Join WhatsApp Group