ಚಿತ್ರರಂಗಕ್ಕೆ ಮತ್ತೊಂದು ಶಾಕ್ ➤ ಯುವ ನಟ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ಜು.30:  ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ದುರಂತ ಪ್ರಕರಣದ ನೆನಪು ಮಾಸುವ ಮುನ್ನವೇ ಮತ್ತೊಬ್ಬ ಯುವ ನಟ ಸಾವನ್ನಪ್ಪಿದ್ದಾರೆ. 32 ವರ್ಷದ ಮರಾಠಿ ನಟ ಆಶುತೋಷ್ ಭಕ್ರೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮರಾಠಿ ಚಿತ್ರರಂಗದ 32 ವರ್ಷದ ನಟ ಆಶುತೋಷ್ ಭಕ್ರೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

 

ಮಹಾರಾಷ್ಟ್ರದ ಮರಾಠವಾಡದ ನಂದೇಡ್ ಪಟ್ಟಣದಲ್ಲಿರುವ ತಮ್ಮ ಮನೆಯಲ್ಲಿ ಅವರು ಜುಲೈ 29ರಂದು ನೇಣುಬಿಗಿದುಕೊಂಡು ಸಾವನ್ನಪ್ಪಿರುವುದು ತಿಳಿದುಬಂದಿದೆ. ನಂದೇಡ್ನ ಗಣೇಶ್ ನಗರ್ನಲ್ಲಿ ಇರುವ ಫ್ಲಾಟ್ನಲ್ಲಿ ಭಕ್ರೆ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಮೊದಲು ಕಂಡಿದ್ದು ಅವರ ಪೋಷಕರು. ಆಶುತೋಷ್ ಭಕ್ರೆ ಅವರು ಮರಾಠಿ ಕಿರುತೆರೆ ನಟಿ ಮಯೂರಿ ದೇಶಮುಖ್ ಅವರ ಪತಿ.ಆಶುತೋಷ್ ಭಕ್ರೆ ಹೆಂಡತಿ ಮಯೂರಿ ದೇಶಮುಖ್ ಅವರು ಖುಲ್ತಾ ಕಾಲಿ ಖುಲೇನಾ ಎಂಬ ಮರಾಠಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ್ದಾರೆ.ಆಶುತೋಷ್ ಭಕ್ರೆ ಅವರು ‘ಭಕರ್’, ‘ಇಚರ್ ಥಾರ್ಲ ಪಕ್ಕಾ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.ಆಶುತೋಷ್ ಭಕ್ರೆ ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಕಳೆದ ಕೆಲ ದಿನಗಳಿಂದ ಅವರು ಖಿನ್ನತೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ನಂದೇಡ್ನ ಶಿವಾಜಿನಗರ್ ಪೊಲೀಸ್ ಠಾಣೆಯಲ್ಲಿ ಆಕಸ್ತಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  ಬಸ್ ಸೌಲಭ್ಯಕ್ಕೆ ಒತ್ತಾಯಿಸಿ-ಹುಬ್ಬಳ್ಳಿ-ವಿಜಯಪುರ ಗ್ರಾಮಸ್ಥರಿಂದ ಪ್ರತಿಭಟನೆ ➤ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು 

 

 

error: Content is protected !!
Scroll to Top