ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮೂಲಕ ವೈದ್ಯ ಸಲಹೆಯಂತೆ ಹೆರಿಗೆ ಮಾಡಿಸಿದ ಸ್ಥಳೀಯ ಮಹಿಳೆಯರು.. !!!

(ನ್ಯೂಸ್ ಕಡಬ) newskadaba.com ಹಾವೇರಿ: ಜು.28., .
ತುಂಬು ಗರ್ಭಿಣಿ ಮಹಿಳೆಯೋರ್ವರಿಗೆ ಸ್ಥಳೀಯ ಮಹಿಳೆಯರು ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮೂಲಕ ವೈದ್ಯರೊಬ್ಬರ ಸಲಹೆ ಮೇರೆಗೆ ಸಹಜ ಹೆರಿಗೆ ಮಾಡಿಸಿದ ಘಟನೆ ಹಾನಗಲ್ ಪಟ್ಟಣದಲ್ಲಿ ನಡೆದಿದೆ.


ಸೋಮವಾರ ಕೊರೋನಾ ಲಾಕ್ಡೌನ್ ಹಿನ್ನೆಲೆ ಸ್ತಬ್ಧವಾಗಿದ್ದ ಹಾನಗಲ್ ಪಟ್ಟಣದ ತುಂಬು ಗರ್ಭಿಣಿ ವಾಸವಿ ಫತ್ತೇಪೂರ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಸ್ಥಳೀಯವಾಗಿ ವಾಹನ ಮತ್ತು ವೈದ್ಯರು ಸಿಗದೆ ಪರದಾಡಿದರು. ನಂತರ ತಾವೇ ಹೆರಿಗೆ ಮಾಡಲು ನಿರ್ಧರಿಸಿದ ಸ್ಥಳೀಯ ಮಹಿಳೆಯರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಡಾ.ಪ್ರಿಯಾಂಕಾ ಮಂತಗಿ ಅವರಿಗೆ ಕರೆ ಮಾಡಿದರು. ಹೆರಿಗೆ ವಿಧಾನವನ್ನು ವಾಟ್ಸ್ಆ್ಯಪ್ ವಿಡಿಯೋ ಕಾಲ್ನಲ್ಲೇ ವೈದ್ಯೆ ತಿಳಿಸಿದರು. ಅದರಂತೆ ಸ್ಥಳೀಯ ಮಹಿಳೆಯರು ಗರ್ಭಿಣಿಗೆ ಸುರಕ್ಷಿತ ಹೆರಿಗೆ ಮಾಡುವಲ್ಲಿ ಯಶಸ್ವಿಯಾದರು.

Also Read  ಫೆಬ್ರವರಿಯಲ್ಲಿ ಅಮೆರಿಕಕ್ಕೆ ಮೋದಿ ಭೇಟಿ ; ಟ್ರಂಪ್‌


ಮಹಿಳೆಯರ ಮತ್ತು ವೈದ್ಯರ ಸಮಯ ಪ್ರಜ್ಞೆಯಿಂದ ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಮನೆಯಲ್ಲಿ ಸಂಭ್ರಮ ಮನೆಮಾಡಿದೆ.

error: Content is protected !!
Scroll to Top