ಮಕ್ಕಳೆದುರೇ ಪತ್ರಕರ್ತನ ಹತ್ಯೆಗೆ ಯತ್ನ ➤ ನಡುರಸ್ತೆಯಲ್ಲಿ ಗುಂಡು ಹಾರಿಸಿದ ಐವರ ಬಂಧನ

(ನ್ಯೂಸ್ ಕಡಬ) newskadaba.com ನವದೆಹಲಿ, ಜು.21:  ಘಜಿಯಾಬಾದ್​ನಲ್ಲಿ ಸೋಮವಾರ ರಾತ್ರಿ 10.30ಕ್ಕೆ ಪತ್ರಕರ್ತನ ತಲೆಗೆ ದುಷ್ಕರ್ಮಿಗಳ ತಂಡವೊಂದು ಗುಂಡಿಕ್ಕಿ ಕೊಲ್ಲಲು ಪ್ರಯತ್ನಿಸಿದೆ. ಘಜಿಯಾಬಾದ್‌ನಲ್ಲಿ ಸಹೋದರಿ ಮನೆಯಿಂದ ತನ್ನ ಇಬ್ಬರು ಮಕ್ಕಳ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ದಾಳಿ ನಡೆಸಿರುವ ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಒಟ್ಟು 9 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘಜಿಯಾಬಾದ್​ನ ಪತ್ರಕರ್ತ ವಿಕ್ರಂ ಜೋಶಿ ತಂಗಿಯ ಮನೆಯಿಂದ ತನ್ನ ಬೈಕಿನಲ್ಲಿ ಇಬ್ಬರು ಹೆಣ್ಣುಮಕ್ಕಳೊಂದಿಗೆ ವೇಗವಾಗಿ ಚಲಿಸುತ್ತಿರುವಾಗ ದುಷ್ಕರ್ಮಿಗಳ ಗುಂಪು ವಾಹನವನ್ನು ಅಡ್ಡಗಟ್ಟಿದ್ದಾರೆ. ಅವರ ಮೇಲೆ ಹಲ್ಲೆ ನಡೆಸಿ ಎಳೆದಾಡಿದ್ದಾರೆ. ಪತ್ರಕರ್ತನ ಮೇಲೆ ಓರ್ವ ಗನ್‌ನಿಂದ ಶೂಟ್ ಮಾಡಿದ್ದಾನೆ. ಗಾಯಗೊಂಡಿದ್ದ ಪತ್ರಕರ್ತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಐವರ ಗುಂಪು ಪತ್ರಕರ್ತನ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆ ಐವರು ಕೂಡ ಪತ್ರಕರ್ತ ವಿಕ್ರಂ ಜೋಶಿ ಕುಟುಂಬಕ್ಕೆ ಪರಿಚಯವಿದ್ದವರೇ ಆಗಿದ್ದಾರೆ. ವಿಕ್ರಂ ಜೋಶಿಯನ್ನು ಕಾರಿನತ್ತ ಎಳೆದುಕೊಂಡು ಹೋದ ದುಷ್ಕರ್ಮಿಗಳು ಆತನ ಮಕ್ಕಳೆದುರೇ ಗುಂಡು ಹಾರಿಸಿದ್ದಾರೆ. ಆಗ ಆತನ ಹೆಣ್ಣುಮಕ್ಕಳಿಬ್ಬರೂ ಸಹಾಯಕ್ಕಾಗಿ ಕಿರುಚಾಡಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳನ್ನು ಅಡ್ಡಹಾಕಿ, ತಮ್ಮ ಅಪ್ಪನನ್ನು ಕಾಪಾಡುವಂತೆ ಅವರು ಗೋಗರೆಯುತ್ತಿದ್ದ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಗ ಅಪರಿಚಿತರೊಬ್ಬರು ವಿಕ್ರಂ ಜೋಶಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

Also Read  ತೋಟದ ಕೆಲಸದವನಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ➤ ಆರೋಪಿಗೆ ನ್ಯಾಯಾಂಗ ಬಂಧನ

 

 

error: Content is protected !!
Scroll to Top