ನನಗೆ ಮತ್ತು ತಂದೆಯವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ➤ ಅಭಿಷೇಕ್ ಬಚ್ಚನ್ ಟ್ವೀಟ್‌..!!!

(ನ್ಯೂಸ್ ಕಡಬ) newskadaba.com ಮುಂಬೈ. ಜು.12,. ಮಹಾಮಾರಿ ಕೊರೋನಾ ದೇಶವ್ಯಾಪ್ತಿ ಹಬ್ಬುತ್ತಿದೆ, ಮಹಾಮಾರಿ ಕೊರೋನಾ ದೇಶವ್ಯಾಪ್ತಿ ಹಬ್ಬುತ್ತಿದೆ, ಚಿತ್ರಕಲಾವಿದರು, ರಾಜಕರಣಿಗಳು, ಕೊರೋನಾ ವಾರಿಯರ್ಸ್ ಗಳನ್ನು ಬಿಟ್ಟಿಲ್ಲ ಈ ಕೊರೋನಾ. ಇದೀಗ ಅಭಿಷೇಕ್ ಬಚ್ಚನ್ ಅವರಿಗೂ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ.

ಶನಿವಾರ ರಾತ್ರಿ 11.57ಕ್ಕೆ ಈ ಬಗ್ಗೆ ಸ್ವತಃ ಟ್ವೀಟ್‌ ಮಾಡಿರುವ ಅವರು ಇವತ್ತು ನನಗೆ ಮತ್ತು ತಂದೆಯವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇಬ್ಬರಲ್ಲೂ ಸಣ್ಣ ಮಟ್ಟದಲ್ಲಿ ಸೋಂಕಿನ ಲಕ್ಷಣ ಕಾಣಿಸಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದೇವೆ. ಈ ವಿಚಾರವನ್ನು ನಾವು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೇವೆ. ನಮ್ಮ ಕುಟುಂಬ, ಸಿಬ್ಬಂದಿಯ ಪರೀಕ್ಷೆ ನಡೆದಿದೆ. ಯಾರೂ ಭಯಪಡುವ ಅಗತ್ಯವಿಲ್ಲ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಪತ್ನಿ ಐಶ್ವರ್ಯಾ‌ ಬಚ್ಚನ್‌‌ ಮತ್ತು ಜಯಾ ಬಚ್ಚನ್‌ ಅವರು ಕೋವಿಡ್‌ ಪರೀಕ್ಷೆ ಮಾಡಿಕೊಂಡಿದ್ದು, ಫಲಿತಾಂಶ ನೆಗೆಟಿವ್ ಬಂದಿದೆ.
ಈ ಮೊದಲು ಬಿಗ್‌ ಬಿ ಅಮಿತಾಬ್ ಬಚ್ಚನ್‌ ಟ್ವೀಟ್‌ ಮಾಡಿ ಕೊರೊನಾ ಬಂದಿರುವುದನ್ನು ಖಚಿತಡಿಸಿದ್ದರು. ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದೇನೆ. ನಮ್ಮ ಕುಟುಂಬದವರು ಹಾಗೂ ಸಿಬ್ಬಂದಿಯನ್ನು ಸಹ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿಗಾಗಿ ಕಾಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

Also Read  ಡಿ.ಕೆ. ಶಿವಕುಮಾರ್ ಪುತ್ರಿಯ ಮದುವೆಗೆ ಡೇಟ್ ಫಿಕ್ಸ್

ಕಳೆದ 10 ದಿನಗಳಿಂದ ನನ್ನ ಜೊತೆ ಯಾರ್ಯಾರು ಸಂಪರ್ಕದಲ್ಲಿದಿರೋ ಅವರೆಲ್ಲರೂ ದಯವಿಟ್ಟು ಸ್ವಯಂ ಪ್ರೇರಿತವಾಗಿ ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ವಿನಂತಿಸುತ್ತೇನೆ ಎಂದು ಬರೆದಿದ್ದಾರೆ. ಬಿಗ್ ಬಿಗೆ ಹೇಗೆ ಕೊರೊನಾ ತಗುಲಿತು ಎಂಬುದೇ ಆಶ್ಚರ್ಯವಾಗಿದ್ದು ಇಬ್ಬರು ಮುಂಬೈಯಲ್ಲಿರುವ ಬಿಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಮಿತಾಬ್ ಅವರ ಅಭಿನಯದ ಗುಲಾಬೋ ಸಿತಾಬೋ ಸಿನಿಮಾ ಇತ್ತೀಚೆಗಷ್ಟೇ ಓಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಬಿಡುಗಡೆಯಾಗಿತ್ತು. ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಆನ್‍ಲೈನ್ ವೇದಿಕೆಯಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

error: Content is protected !!
Scroll to Top