ವೈದ್ಯರು ಸೇರಿದಂತೆ ಆರು ಮಂದಿ ಸಿಬ್ಬಂದಿಗಳಿಗೆ ಕೊರೊನಾ ಸುಳ್ಯ ಸರಕಾರಿ ಆಸ್ಪತ್ರೆ ಸೀಲ್ ಡೌನ್



(ನ್ಯೂಸ್ ಕಡಬ)newskadaba.com ಸುಳ್ಯ: ಜು.8, ತಾಲೂಕಿನ ಸರಕಾರಿ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್ ಗಳು ಸೇರಿದಂತೆ ಒಟ್ಟು ಆರು ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.







ಕೆಲ ದಿನಗಳ ಹಿಂದೆ ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿಯೋರ್ವರಿಗೆ ಕೊರೊನಾ ದೃಢಪಟ್ಟ ಬಳಿಕ ಅವರು ಮಂಗಳೂರಿಗೆ ಹೋಗಿದ್ದರು. ಆ ವ್ಯಕ್ತಿಗೆ ಚಿಕಿತ್ಸೆ ‌ನೀಡಿದ್ದ ನರ್ಸ್ ಗೆ ಕೂಡಾ ಕೊರೊನಾ ದೃಢವಾಗಿತ್ತು. ಇದೀಗ ಸರಕಾರಿ ಆಸ್ಪತ್ರೆಯ ಓರ್ವ ವೈದ್ಯಾಧಿಕಾರಿ, ಮೂವರು ನರ್ಸ್ ಗಳು ಹಾಗೂ ಇಬ್ಬರು ಡಯಾಲಿಸಿಸ್ ವಿಭಾಗದ ತಂತ್ರಜ್ಞರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.






ಆಸ್ಪತ್ರೆಯಲ್ಲಿ ಈಗಾಗಲೇ 17 ಮಂದಿ ಒಳರೋಗಿಗಳಿದ್ದು, ಅವರಿಗೆ ಚಿಕಿತ್ಸೆ ನೀಡಲು ಒಬ್ಬರು ವೈದ್ಯಾಧಿಕಾರಿ ಹಾಗೂ ಮೂವರು ನರ್ಸ್ ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಎರಡು ದಿನಗಳ ಕಾಲ ಸ್ಯಾನಿಟೈಸೇಶನ್ ನಡೆಯುವುದರಿಂದ ಸೀಲ್ ಡೌನ್ ಮಾಡಲಾಗಿದ್ದು, ಹೊಸದಾಗಿ ಬರುವ ರೋಗಿಗಳಿಗೆ ಹಾಗೂ ಹೆರಿಗೆಗೆ ಬರುವವರಿಗೂ ಕೂಡ ಅವಕಾಶವಿರುವುದಿಲ್ಲ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.

error: Content is protected !!
Scroll to Top