ಭಾರತದಲ್ಲಿ ಕೊರೋನಾಗೆ 19 ಸಾವಿರದ 693 ಸಾವು ➤ ರಷ್ಯಾವನ್ನು ಹಿಂದಿಕ್ಕಿರುವ ಭಾರತ.!!!

(ನ್ಯೂಸ್ ಕಡಬ) newskadaba.com ನವದೆಹಲಿ, ಜು.06.,ಭಾರತದಲ್ಲಿ ಕೊರೋನ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 24 ಸಾವಿರದ 248 ಹೊಸ ಪ್ರಕರಣಗಳು ವರದಿಯಾಗಿದ್ದು 425 ಮಂದಿಯನ್ನು ಬಲಿ ತೆಗೆದು ಕೊಂಡಿದೆ.

6,97,413 ಪಾಸಿಟಿವ್ ಕೇಸುಗಳಿದ್ದು ಅವುಗಳಲ್ಲಿ 2,53,287 ಸಕ್ರಿಯ ಕೇಸುಗಳಾಗಿವೆ, 4,24,433 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಭಾರತದಲ್ಲಿ ಒಟ್ಟು 19 ಸಾವಿರದ 693 ಸಾವು ಸಂಭವಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶ ತಿಳಿಸಿದೆ.


ಕೋವಿಡ್-19 ಸಾಂಕ್ರಾಮಿಕ ಕೇಸಿನಲ್ಲಿ ರಷ್ಯಾವನ್ನು ಹಿಂದಿಕ್ಕಿರುವ ಭಾರತ ಮೂರನೇ ಸ್ಥಾನದಲ್ಲಿದೆ. ದೇಶದಲ್ಲಿ ಇದುವರೆಗೆ ಕೊರೋನಾ ಸೋಂಕಿತರ ಸಂಖ್ಯೆ 6.90 ಲಕ್ಷ ಗಡಿ ದಾಟಿದೆ ಎಂದು ವರ್ಲ್ಡೊಮೀಟರ್ ತಿಳಿಸಿದೆ. ಸದ್ಯ ಕೊರೋನಾ ಸೋಂಕಿತರ ಪ್ರಕರಣಗಳಲ್ಲಿ ಅಮೆರಿಕ ಮತ್ತು ಬ್ರೆಜಿಲ್ ಮಾತ್ರ ಮುಂದಿವೆ.

Also Read  ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಯುತ್ತಿರುವಾಗಲೇ ► ಬಂಟ್ವಾಳದ ಸ್ಪರ್ಧಿ ಕುಸಿದು ಬಿದ್ದು ಮೃತ್ಯು


ನಿನ್ನೆಯವರೆಗೆ ಭಾರತ ದೇಶದಲ್ಲಿ 99 ಲಕ್ಷದ 69 ಸಾವಿರದ 662 ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.


ರಷ್ಯಾ ದೇಶದಲ್ಲಿ ಇಲ್ಲಿಯವರೆಗೆ 6 ಲಕ್ಷದ 81 ಸಾವಿರದ 251 ಮಂದಿ ಸೋಂಕಿತರಿದ್ದು ಬ್ರೆಜಿಲ್ ನಲ್ಲಿ 15 ಲಕ್ಷದ 78 ಸಾವಿರದ 376 ಮತ್ತು ಅಮೆರಿಕದಲ್ಲಿ 29 ಲಕ್ಷದ 54 ಸಾವಿರದ 999 ಕೊರೋನಾ ಸೋಂಕಿತ ಪ್ರಕರಣಗಳಿವೆ.

error: Content is protected !!
Scroll to Top