ಕೊರೊನಾ ರಣಕೇಕೆ ➤ ಮೂರನೇ ಸ್ಥಾನದತ್ತ ಮುನ್ನುಗ್ಗುತ್ತಿರುವ ಭಾರತ!

(ನ್ಯೂಸ್ ಕಡಬ) newskadaba.com ನವದೆಹಲಿ, ಜು.03., ದೇಶದಲ್ಲಿ ಕೊರೊನಾ ಸೋಂಕು ಅಬ್ಬರಿಸಿ ರಣಕೇಕೆ ಹಾಕುತ್ತಿದೆ. ಪ್ರತಿ ನಿತ್ಯ ಸರಿ ಸುಮಾರು 20 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗೆ ಹೆಚ್ಚಾಗುತ್ತಿರುವ ಸೋಂಕು ಭಾರತವನ್ನು ಇನ್ನು ಮೂರೇ ದಿನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂನರೇ ಸ್ಥಾನಕ್ಕೆ ತಂದು ನಿಲ್ಲಿಸುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ.

ಹೌದು. ದೇಶದಲ್ಲಿ ಹಬ್ಬುತ್ತಿರುವ ಮಹಾಮಾರಿ ಸೋಂಕು ಭಾರತವನ್ನು ಕೊರೊನಾ ಪೀಡಿತ ರಾಷ್ಟ್ರಗಳಲ್ಲಿ ಅಗ್ರಗಣ್ಯ ಸ್ಥಾನಕ್ಕೆ ಕರೆದೊಯ್ಯುತ್ತಿದೆ. ದೇಶದಲ್ಲಿ ಸೋಂಕು ಹಬ್ಬುತ್ತಿರುವ ವೇಗ ಹೆಚ್ಚಾಗಿದ್ದು ಪ್ರತಿದಿನ 20 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ತಿದೆ.


ಜಾಗತಿಕವಾಗಿ ಕೊರೊನಾ ಪೀಡಿತ ದೇಶಗಳಲ್ಲಿ ಸದ್ಯ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಈವರೆಗೂ ದೇಶದಲ್ಲಿ 6 ಲಕ್ಷದ 27 ಸಾವಿರ ಮಂದಿಯಲ್ಲಿ ಸೋಂಕು ದೃಢವಾಗಿದೆ. 6 ಲಕ್ಷದ 61 ಸಾವಿರ ಕೇಸ್ ಹೊಂದಿರುವ ರಷ್ಯಾ ಮೂರನೇ ಸ್ಥಾನದಲ್ಲಿದೆ. ರಷ್ಯಾ ಮತ್ತು ಭಾರತ ಸೋಂಕು ಪ್ರಮಾಣ ಏರಿಕೆ ಗಮನಿಸಿದರೆ ಭಾರತ ಇನ್ನು ಮೂರೇ ದಿನದಲ್ಲಿ ವಿಶ್ವದ ಅತಿ ಹೆಚ್ಚು ಕೊರೊನಾ ಪೀಡಿತ ದೇಶಗಳ ಪಟ್ಟಿಯ ಮೂರನೇ ಸ್ಥಾನಕ್ಕೆ ಏರೋದರಲ್ಲಿ ಅನುಮಾನವಿಲ್ಲ.

Also Read  ಪಾಕ್ ವಶದಲ್ಲಿದ್ದ 7 ಭಾರತೀಯ ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಣೆ

* ಅಮೆರಿಕ – 27,82, 539 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಮೊದಲ ಸ್ಥಾನದಲ್ಲಿದೆ. ಪ್ರತಿದಿನಕ್ಕೆ 45-50 ಸಾವಿರ ಕೇಸ್‍ಗಳು ಪತ್ತೆಯಾಗುತ್ತಿದೆ.
* ಬ್ರೇಜಿಲ್ – 14,56, 969 ಮಂದಿಯ ಮೈ ಹೊಕ್ಕಿರುವ ಕೊರೊನಾ ಇಲ್ಲೂ ಕೂಡ ಪ್ರತಿ ದಿನ 50 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ತಿದೆ.
* ರಷ್ಯಾದಲ್ಲಿ 6,61,165 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಪ್ರತಿನಿತ್ಯ 6-7 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ತಿದೆ.
* ಇನ್ನು ಭಾರತದಲ್ಲಿ 6,04,461 ಮಂದಿಯಲ್ಲಿ ಸೋಂಕು ಕನ್ಫರ್ಮ್ ಆಗಿದ್ದು ನಿತ್ಯ 19-20 ಸಾವಿರ ಮಂದಿ ಮೈ ಹೊಕ್ಕುತ್ತಿದೆ ಮಹಾಮಾರಿ ಕೊರೋನಾ.

ಪ್ರತಿ ನಿತ್ಯ ಸೋಂಕು ಹೆಚ್ಚುತ್ತಿರುವ ರಾಷ್ಟ್ರಗಳಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದ್ದು ಪ್ರತಿ ನಿತ್ಯ 20 ಸಾವಿರ ಅಂದಾಜು ಮಾಡಿದರೆ ಮೂರು ದಿನದಲ್ಲಿ ಒಟ್ಟು ಸೋಂಕಿತರ ಪಟ್ಟಿಯಲ್ಲೂ ಭಾರತ, ರಷ್ಯಾವನ್ನು ಹಿಂದಿಕ್ಕಿ ಕೊರೊನಾ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಟಾಪ್ ತ್ರಿ ಯಲ್ಲಿ ಬಂದು ಕೂರಲಿದೆ.

error: Content is protected !!
Scroll to Top