‘ಏಕ್ ದೋ ತೀನ್’ ಖ್ಯಾತಿಯ ಬಾಲಿವುಡ್ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ

(ನ್ಯೂಸ್ ಕಡಬ) newskadaba.com ಮುಂಬೈ,ಜು.03:  ಬಾಲಿವುಡ್‌ ಮಾಸಿ- ಕ್ಲಾಸಿ ನೃತ್ಯ ಸಂಯೋಜಕಿ ಸರೋಜ್ ಖಾನ್ ಇಂದು (ಜುಲೈ 3) ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮುಂಬೈನ ಗುರು ನಾನಕ್ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಗೆ ಚಿಕಿತ್ಸೆಪಡೆಯುತ್ತಿದ್ದರು.

 

2000 ಸಾವಿರಕ್ಕೂ ಹೆಚ್ಚು ಸಿನಿಮಾ ಹಾಡುಗಳಿಗೆ ನೃತ್ಯ ಸಂಯೋಜಿಸಿರುವ ಸರೋಜ್‌ ಖಾನ್‌ ಅವರನ್ನು ಬಿ-ಟೌನ್‌ನಲ್ಲಿ ಎಲ್ಲರೂ ‘ಮಾಸ್ಟರ್‌ಜಿ’ ಎಂದೇ ಸಂಬೋಧಿಸುತ್ತಿದ್ದರು. ಸರೋಜ್‌ ಖಾನ್‌ಗೆ ಕೋವಿಡ್‌-19 ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿತ್ತು ಎಂದು ತಿಳಿದು ಬಂದಿದೆ. . 1948ರಲ್ಲಿ ಜನಿಸಿದ ಸರೋಜ್‌ ಖಾನ್‌ 3 ವರ್ಷದಲ್ಲೇ ನೃತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. 80-90 ದಶಕದಲ್ಲಿ ಬಾಲಿವುಡ್‌ನ ಆಳಿದ ಸ್ಟಾರ್ ನಟ-ನಟಿಯರು ತಮ್ಮ ನೃತ್ಯಕ್ಕೆ ಸರೋಜ್‌ ಖಾನ್‌ ಅವರೇ ಸಂಯೋಜನೆ ಬೇಕೆಂದು ಡಿಮ್ಯಾಂಡ್‌ ಮಾಡುತ್ತಿದ್ದರಂತೆ. ಅದರಲ್ಲೂ ಹೆಚ್ಚಾಗಿ ಮಾಧುರಿ ದೀಕ್ಷಿತ್ ಹಾಗೂ ಶ್ರೀದೇವಿ ಜೊತೆ ಕೆಲಸ ಮಾಡಿದ ಅನುಭವ ಇವರಿಗಿತ್ತುರಾಷ್ಟ್ರ ಪ್ರಶಸ್ತಿ ಸೇರಿ, ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಸರೋಜ್ ಮಡಿಲಿಗ ಸೇರಿದ್ದವು.

Also Read  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸಹೋದರರು

 

 

error: Content is protected !!
Scroll to Top