ವಯನಾಡು: ವಿದ್ಯಾರ್ಥಿಗಳಿಗೆ 175 ಸ್ಮಾರ್ಟ್ ಟಿವಿ ನೀಡಿದ ರಾಹುಲ್‌ ಗಾಂಧಿ

(ನ್ಯೂಸ್ ಕಡಬ) newskadaba.com ವಯನಾಡು ,ಜು.02:ಕೊರೊನಾ ವೈರಸ್‌ ಕಾರಣದಿಂದ ಕೇರಳದಲ್ಲಿ ಆನ್‌ಲೈನ್‌ ಶಿಕ್ಷಣವನ್ನು ಆರಂಭ ಮಾಡಲಾಗಿದ್ದು ಈ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಯನಾಡು ಜಿಲ್ಲೆಯ ಕಲ್ಪೆಟ್ಟ ಪಟ್ಟಣದ ಬುಡಕಟ್ಟು ವಿದ್ಯಾರ್ಥಿಗಳಿಗೆ 175 ಸ್ಮಾರ್ಟ್ ಟಿವಿಗಳನ್ನು ನೀಡಿದ್ದಾರೆ.

 

ಕೇರಳದಲ್ಲಿ ಫಸ್ಟ್‌ ಬೆಲ್‌ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದ್ದು ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ಈ ಶಿಕ್ಷಣದಿಂದ ವಂಚಿತರಾಗಬಾರದು ಎಂದು ವಯನಾಡು ಸಂಸದರಾಗಿರುವ ರಾಹುಲ್‌ ಗಾಂಧಿ ಬುಡಕಟ್ಟು ವಿದ್ಯಾರ್ಥಿಗಳಿಗೆ 175 ಸ್ಮಾರ್ಟ್ ಟಿವಿಗಳನ್ನು ಒದಗಿಸಿದ್ದಾರೆ.

Also Read  ಮುಂಬೈ ಸ್ಪೀಡ್ಬೋಟ್ ದುರಂತ - 13 ಮಂದಿ ಸಾವು, ಪ್ರಧಾನಿಯಿಂದ ಪರಿಹಾರ ಘೋಷಣೆ

 

error: Content is protected !!
Scroll to Top