21 ವರ್ಷದ ಟಿಕ್ ಟಾಕ್ ಸ್ಟಾರ್ ಕೊಲೆ ➤ ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರೇಮಿ.!

(ನ್ಯೂಸ್ ಕಡಬ) newskadaba.com ನವದೆಹಲಿ,ಜೂ.29:   ಒನ್ ಸೈಡ್ ಲವ್​ನಿಂದ ಕ್ರೋದಗೊಂಡ ಯುವಕನೊಬ್ಬ 21 ವರ್ಷದ ಟಕ್ ಟಾಕ್ ಸ್ಟಾರ್ ಶಿವಾನಿಯನ್ನ ಕೊಂದಿರುವ ಘಟನೆ ಹರಿಯಾಣ ಜಿಲ್ಲೆಯ ಸೋನೆಪತ್ ಜಿಲ್ಲೆಯಲ್ಲಿ ನಡೆದಿದೆ. ಅರಿಫ್ ಎಂಬಾತ ತನ್ನ ಮಗಳನ್ನ ಕೊಂದಿದ್ದಾನೆ ಎಂದು ಶಿವಾನಿಯ ತಂದೆ ವಿನೋದ್ ಅವರು ಕುಂಡ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ಧಾರೆ. ನಿನ್ನೆ ಭಾನುವಾರ ಶಿವಾನಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಲಾಗಿರುವುದು ತಿಳಿದುಬಂದಿದೆ. ಪೊಲೀಸರು ಆರೋಪಿ ಆರಿಫ್​ನನ್ನು ಹಿಡಿಯಲು ಬಲೆ ಬೀಸಿದ್ಧಾರೆ.

 

ಕುಂಡ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯು ಶಿವಾನಿ ವಿಚಾರದಲ್ಲಿ ಬಹಳ ಹಠಮಾರಿಯಾಗಿದ್ದಂತಿದೆ. ತನ್ನೊಂದಿಗೆ ಮಾತು ಬಿಟ್ಟಿದ್ದನ್ನ ಸಹಿಸಿಕೊಳ್ಳಲಾಗದೇ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ತೋರುತ್ತದೆ ಎಂದು ಕುಂಡ್ಲಿಯ ಠಾಣಾಧಿಕಾರಿ ಅಭಿಪ್ರಾಯಪಟ್ಟಿದ್ಧಾರೆ.

Also Read  ಮಹಾಕುಂಭಮೇಳ: ಪ್ರಯಾಗ್‌ರಾಜ್‌ನಲ್ಲಿರುವ ಕನ್ನಡಿಗರ ರಕ್ಷಣೆಗೆ ಸಹಾಯವಾಣಿ

 

error: Content is protected !!
Scroll to Top