11 ಗಂಟೆಗೆ ಮೋದಿ ಮನ್ ಕಿ ಬಾತ್ ➤ ಜನತಾ ಸಲಹೆಗಳ ಬುತ್ತಿ ಬಿಚ್ಚಿಡಲಿರುವ ಪ್ರಧಾನಿ

(ನ್ಯೂಸ್ ಕಡಬ) newskadaba.com ನವದೆಹಲಿ,ಜೂ.28:  ಮಾರಕ ಕೊರೊನಾ ವೈರಸ್ ಹಾವಳಿ, ನಡುವೆ, ಇಂದು(ಭಾನುವಾರ) ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದು, ಪ್ರಮುಖವಾಗಿ ಈ ಕಾರ್ಯಕ್ರಮಕ್ಕೆ ಜನರು ಕಳುಹಿಸಿರುವ ಸಲಹೆಗಳನ್ನು ಪ್ರಧಾನಿ ಮೋದಿ ದೇಶದ ಮುಂದಿಡಲಿದ್ದಾರೆ.

 


ಪ್ರಮುಖವಾಗಿ ಕೊರೊನಾ ವೈರಸ್ ಹಾವಳಿ ವಿಷಯವೇ ಚರ್ಚೆಗೆ ಬರಲಿದ್ದು, ಮಾರಕ ವೈರಾಣುವನ್ನು ನಿಯಂತ್ರಿಸುವ ಕುರಿತು ಪ್ರಧಾನಿ ಮೋದಿ ದೇಶಕ್ಕ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.ಇದೇ ವೇಳೆ ಲಡಾಖ್ ಗಡಿಯಲ್ಲಿ ಸಂಭವಿಸಿರುವ ಭಾರತ-ಚೀನಾ ಸೈನಿಕರ ನಡುವಿನ ಭೀಕರ ಹಿಂಸಾತ್ಮಕ ಘರ್ಷಣೆ ಹಾಗೂ ಗಡಿ ಸಂರಕ್ಷಣೆಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಪ್ರಧಾನಿ ಮೋದಿ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.ಇದೇ ವೇಳೆ ಲಡಾಖ್ ಗಡಿಯಲ್ಲಿ ಸಂಭವಿಸಿರುವ ಭಾರತ-ಚೀನಾ ಸೈನಿಕರ ನಡುವಿನ ಭೀಕರ ಹಿಂಸಾತ್ಮಕ ಘರ್ಷಣೆ ಹಾಗೂ ಗಡಿ ಸಂರಕ್ಷಣೆಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಪ್ರಧಾನಿ ಮೋದಿ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Also Read  ಸಾಯಲೆಂದು ಬಂದು ರೈಲ್ವೇ ಟ್ರ್ಯಾಕ್ ನಲ್ಲಿ ನಿದ್ರೆಗೆ ಜಾರಿದ ಯುವತಿ - ಅದೃಷ್ಟವಶಾತ್ ಪಾರು

 

 

error: Content is protected !!
Scroll to Top