ಸಾರಡ್ಕ ಚೆಕ್ ಪೋಸ್ಟ್ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

(ನ್ಯೂಸ್ ಕಡಬ)newskadaba. ಕಾಸರಗೋಡು, ಜೂ 26. ಕೇರಳ -ಕರ್ನಾಟಕ ಗಡಿಯ ಸಾರಡ್ಕ ಎಂಬಲ್ಲಿಯ ಚೆಕ್ ಪೋಸ್ಟ್ ನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷವು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ಸಾರಡ್ಕ ಎಂಬಲ್ಲಿ ಚೆಕ್ ಪೋಸ್ಟ್ ಮೂಲಕ ಸಂಚಾರ ಬಂದ್ ಮಾಡಿದ್ದು , ಇದರಿಂದ ಎಣ್ಮಕಜೆ ಗ್ರಾಮ ಪಂಚಾಯತ್ ನ ಒಂದನೇ ಸಾಯ ವಾರ್ಡ್ , ಎರಡನೇ ಚಾವರ್ ಕೋಡ್ ವಾರ್ಡ್ ಗೊಳಪಟ್ಟ 700 ರಷ್ಟು ಕುಟುಂಬದವರು ಸಿಲುಕುವಂತಾಗಿದೆ. ಅತ್ತ ಕರ್ನಾಟಕವೂ ಇತ್ತ ಕೇರಳವೂ ಅಲ್ಲದ ಸ್ಥಿತಿ ನಿರ್ಮಾಣವಾಗಿದೆ. ಪೆರ್ಲದಲ್ಲಿರುವ ಗ್ರಾಮ ಪಂಚಾಯತ್ ಕಚೇರಿ , ಪಡಿತರ ಅಂಗಡಿ , ಆಸ್ಪತ್ರೆ ಹಾಗೂ ಇತರ ಅಗತ್ಯಗಳಿಗಾಗಿ ತಲುಪಲು ಬದಲಿ ರಸ್ತೆ ಇಲ್ಲದಂತಾಗಿದೆ . ಸಂಚಾರಕ್ಕೆ ತಡೆಯೊಡ್ಡಿದ್ದರಿಂದ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ , ಶಾಸಕ ಎಂ . ಸಿ ಖಮರುದ್ದೀನ್ ಹಾಗೂ ಯು ಡಿ ಎಫ್ ಮುಖಂಡರು ಕರ್ನಾಟಕದ ಮೇಲೆ ಒತ್ತಡ ಹೇರಿದ್ದರೂ ಸಂಚಾರಕ್ಕೆ ತೆರವು ಮಾಡಲು ಮುಂದಾಗಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದ್ದು , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೆ . ಎಸ್ ಸೋಮಶೇಖರ , ಪಂಚಾಯತ್ ಸದಸ್ಯ ಐತಪ್ಪ ಕುಲಾಲ್ , ರಾಧಾಕೃಷ್ಣ ನಾಯ್ಕ್ ಮೊದಲಾದವರು ಹೈಕೋರ್ಟ್ ಮೆಟ್ಟಲೇರಿದ್ದಾರೆ.

Also Read  ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ➤ 14 ಮಂದಿ ದುರ್ಮರಣ

error: Content is protected !!
Scroll to Top