ಶ್ರೀನಗರ: ಇಬ್ಬರು ಉಗ್ರರನ್ನು ನೆಲಕ್ಕುರುಳಿಸಿದ ಭದ್ರತಾ ಪಡೆಗಳು

(ನ್ಯೂಸ್ ಕಡಬ) newskadaba.com ಶ್ರೀನಗರ,ಜೂ.25:  ಭಾರತೀಯ ಭದ್ರತಾ ಪಡೆಗಳು ಇಂದು ಮುಂಜಾನೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಉತ್ತರ ಕಾಶ್ಮೀರದ ಹರ್ಶಿ ಗ್ರಾಮದಲ್ಲಿ ಇಬ್ಬರು ಉಗ್ರರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿವೆ. ಭಾರತೀಯ ಸೇನೆ, ಜಮ್ಮು ಕಾಶ್ಮೀರ ಪೊಲೀಸರು`ಮತ್ತು ಸಿಆರ್ಪಿಎಫ್ ಜವಾನರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಉಗ್ರರನ್ನು ನೆಲಕ್ಕುರುಳಿಸಲಾಗಿದೆ.

ಸಾಪೋರ್ ಜಿಲ್ಲೆಯ ಹರ್ಶಿವ ದಲ್ಲಿ ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದ ಭದ್ರತಾ ಪಡೆಗಳು ಇಬ್ಬರನ್ನು ಹತ್ಯೆ ಮಾಡಿದೆ. ಇನ್ನೂ ಎನ್ ಕೌಂಟರ್ ನಡೆಯುತ್ತಿದೆ ಎಂದು ವರದಿಯಾಗಿದೆ.

Also Read  BIG BREAKING NEWS ಮಂಗಳೂರಿನಲ್ಲಿ ಪ್ರಥಮ ಕೊರೋನ ವೈರಸ್ ಧೃಢ

 

error: Content is protected !!
Scroll to Top