ವಾಯು ಪಡೆಯ ಪೈಲಟ್‌ ಆದ ಚಹಾ ವ್ಯಾಪಾರಿಯ ಮಗಳು

(ನ್ಯೂಸ್ ಕಡಬ) newskadaba.com ಭೋಪಾಲ್,ಜೂ.24: ಬಸ್‌ ನಿಲ್ದಾಣದಲ್ಲಿ ಚಹಾ ವ್ಯಾಪಾರ ಮಾಡುವ ವ್ಯಕ್ತಿಯೊಬ್ಬರ ಪುತ್ರಿ ಭಾರತೀಯ ವಾಯುಪಡೆಯ ಫ್ಲೈಯಿಂಗ್‌‌‌ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ನೀಮುಚ್‌‌ ಜಿಲ್ಲೆಯ ಬಸ್‌ ನಿಲ್ದಾಣದಲ್ಲಿ ಚಹಾ ಅಂಗಡಿ ಹೊಂದಿರುವ ಸುರೇಶ್‌ ಗಂಗ್ವಾಲ್‌‌ ಅವರ ಪುತ್ರಿ ಅಂಚಲ್‌ ಗಂಗ್ವಾಲ್‌(24) ಅವರು ವಾಯುಪಡೆಯ ಫ್ಲೈಯಿಂಗ್‌‌‌ ಅಧಿಕಾರಿಯಾಗಿ ಸೇರ್ಪಡೆಗೊಂಡಿದ್ದಾರೆ.

 

ಅಂಚಲ್‌ ಅವರ ತಂದೆ ಚಹಾ ವ್ಯಾಪಾರಿಯಾಗಿದ್ದು, ತನ್ನ ಪುತ್ರಿಯ ಶಿಕ್ಷಣದ ಶುಲ್ಕ ಪಾವತಿ ಮಾಡಲು ಕೂಡಾ ಅವರಲ್ಲಿ ಹಣ ಇರುತ್ತಿರಲಿಲ್ಲ. ಇಂತಹ ಬಡತನದಲ್ಲಿಯೂ ಅಂಚಲ್‌‌ ಅವರು ತಮ್ಮ ಶಿಕ್ಷಣವನ್ನು ಪೂರೈಸಿ ಪೈಲಟ್‌‌ ಆಗುವ ಕನಸನ್ನು ಈಡೇರಿಸಿಕೊಂಡಿದ್ದಾರೆ.ಈ ಬಗ್ಗೆ ಮಾತನಾಡಿರುವ ಸುರೇಶ್‌ ಗಂಗ್ವಾಲ್‌‌ ಅವರು , ನನ್ನ ಮಗಳು ಭಾರತೀಯ ವಾಯುಪಡೆಯ ಫ್ಲೈಯಿಂಗ್‌‌‌ ಅಧಿಕಾರಿ ನೇಮಕವಾಗಿರುವುದು ನಮ್ಮ ಕುಟುಂಬಕ್ಕೆ ಹೆಮ್ಮೆ ತಂದಿದೆ. ಈ ಹಂತಕ್ಕೆ ಬರಲು ಆಕೆ ತುಂಬಾ ಶ್ರಮವಹಿಸಿದ್ದಾಳೆ ಎಂದಿದ್ದಾರೆ.ಮಧ್ಯಪ್ರದೇಶದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌‌ ಅವರು ಕೂಡಾ ಅಂಚಲ್‌ ಗಂಗ್ವಾಲ್‌‌ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ.

Also Read  'PM Kisan' ಯೋಜನೆಯಡಿ ವಾರ್ಷಿಕ 6 ಸಾವಿರವಲ್ಲ, ಇನ್ಮುಂದೆ 8 ಸಾವಿರ ಲಭ್ಯ     

 

error: Content is protected !!
Scroll to Top