ಪರ್ವತಾರೋಹಿಯ ಪದ್ಮಶ್ರೀ ಪ್ರಶಸ್ತಿ ಕದ್ದೊಯ್ದ ಕಳ್ಳರು ➤ ಠಾಣೆಯಲ್ಲಿ ದೂರು ದಾಖಲು

(ನ್ಯೂಸ್ ಕಡಬ) newskadaba.com ನವದೆಹಲಿ,ಜೂ.16:ಮೌಂಟ್ ಎವರೆಸ್ಟ್ ಏರಿದ್ದ ಪರ್ವತಾರೋಹಿ ಪ್ರೇಮಲತಾ ಅಗರ್ ವಾಲ್ ಅವರ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿಯನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ ಎಂದು ವರದಿಯಾಗಿದೆ ಈ ಬಗ್ಗೆ ಅವರ ಪತಿ ವಿಮಲ್ ಅಗರ್ವಾಲ್ ಮಾಹಿತಿ ನೀಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

 

ಕಳ್ಳರು 20 ಸಾವಿರ ರೂ., 15 ಬೆಳ್ಳಿ ನಾಣ್ಯಗಳು , ಎರಡು ಕಂಪ್ಯೂಟರ್ ಗಳು ಮತ್ತು ಹಾರ್ಡ್ ಡಿಸ್ಕ್ ಗಳನ್ನು ಕದ್ದೊಯ್ದಿದ್ದಾರೆ.
ಕಳೆದ ರಾತ್ರಿ ನನ್ನ ಮನೆಗೆ ನುಗ್ಗಿದ ಕಳ್ಳರು ನನ್ನ ಪತ್ನಿಯ ಪದ್ಮಶ್ರೀ ಪ್ರಶಸ್ತಿ , 20 ಸಾವಿರ ರೂ. ಮತ್ತು 15 ಬೆಳ್ಳಿ ನಾಣ್ಯಗಳು, ಕಂಪ್ಯೂಟರ್ ಮತ್ತು ಹಾರ್ಡ್ ಡಿಸ್ಕ್ ಗಳನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ” ಎಂದು ವಿಮಲ್ ತಿಳಿಸಿದ್ದಾರೆ.

Also Read  ಫ್ಲ್ಯಾಟ್ ನಲ್ಲಿದ್ದ ಚಿನ್ನಾಭರಣವನ್ನು ದೋಚಿದ ಪತಿರಾಯ - ದೂರು ದಾಖಲು

error: Content is protected !!
Scroll to Top