1 ವರ್ಷದ ಮಗುವಿನ ತಲೆಗೆ ಸಿಕ್ಕಿಕೊಂಡ ಪ್ರೆಶರ್‌ ಕುಕ್ಕರ್‌ ➤ ಮುಂದೇನಾಯಿತು ಗೊತ್ತೆ…???

(ನ್ಯೂಸ್ ಕಡಬ) newskadaba.com ರಾಜ್‌ಕೋಟ್, ಜೂ.13., ‌ಆಟವಾಡುತ್ತಿದ್ದ ಸಂದರ್ಭ ಪ್ರೆಶರ್‌ ಕುಕ್ಕರ್‌ ಒಳಗೆ ಒಂದು ವರ್ಷದ ಹೆಣ್ಣು ಮಗುವಿನ ತಲೆ ಸಿಕ್ಕಿಹಾಕಿಕೊಂಡ ಘಟನೆ ಗುಜರಾತ್‌ ರಾಜ್‌ಕೋಟ್‌ನಲ್ಲಿ ಸಂಭವಿಸಿದೆ.


ಶುಕ್ರವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಮಗುವಿನ ತಲೆಗೆ ಸಿಕ್ಕಿಹಾಕಿಕೊಂಡಿದ್ದ ಪ್ರೆಶರ್‌ ಕುಕ್ಕರ್‌ ಅನ್ನು ತೆಗೆಯಲು ಸಾಧ್ಯವಾಗದೆ ಇದ್ದುದರಿಂದ ಆತಂಕಗೊಂಡ ಪೋಷಕರು ಭಾವನಗರ್‌ನ ಸರ್‌ ಟಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಆಸ್ಪತ್ರೆಗೆ ಆಗಮಿಸುವ ಸಂದರ್ಭ ನೋಡಿದವರೆಲ್ಲ ಮಗುವಿನ ತಲೆಗೆ ಹೆಲ್ಮೆಟ್‌ ಬದಲು ಕುಕ್ಕರ್‌ ಹಾಕಿಸಿಕೊಂಡು ಬಂದಿದ್ದಾರೆ ಎಂದೇ ಭಾವಿಸಿದ್ದರು. ಅಸಲಿ ಕಾರಣ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಯತ್ತ ಧಾವಿಸಿ ಬಂದಿದ್ದರು.

Also Read  ಯುವಕನೋರ್ವನಿಂದ ಮಹಿಳೆಗೆ ಲೈಂಗಿಕ ಕಿರುಕುಳ ➤ಆರೋಪಿಯ ಬಂಧನ


ತಲೆಯಿಂದ ಕುಕ್ಕರ್‌ಅನ್ನು ಬಿಡಿಸಲು ಸಾಕಷ್ಟು ಎಳೆದಾಡಿ ಪ್ರಯತ್ನ ಪಟ್ಟಿರುವುದರಿಂದ ಮಗುವಿನ ತಲೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಸ್ವಲ್ಪ ಮಟ್ಟಿಗೆ ಊದಿಕೊಂಡಿದೆ. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ವೈದ್ಯರು ಪಾತ್ರೆ ರಿಪೇರಿ ಮಾಡುವವರನ್ನು ಸಂಪರ್ಕಿಸಿದರು. ಅತ್ಯಂತ ಜಾಗರೂಕತೆಯಿಂದ ಕುಕ್ಕರ್‌ಅನ್ನು ಕಟ್ಟರ್‌ನಿಂದ ತುಂಡುಮಾಡುವ ಮೂಲಕ ಮಗುವಿಗೆ ಪ್ರೆಶರ್‌ ಕುಕ್ಕರ್‌ನಿಂದ ಬಿಡುಗಡೆ ನೀಡಿದ್ದಾರೆ.

error: Content is protected !!
Scroll to Top