ಕೊರೊನಾ ವೈರಸ್ ➤ ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೇರಿದ ಭಾರತ

(ನ್ಯೂಸ್ ಕಡಬ) newskadaba.com ,ಜೂ.12: ಕೊರೊನಾ ಸೋಂಕು ಪೀಡಿತ ರಾಷ್ಟ್ರಗಳ ಪೈಕಿ ಭಾರತ ಇದೀಗ ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೇರಿದೆ. ಗುರುವಾರ ಒಂದೇ ದಿನ 10,956 ಜನರಿಗೆ ಕೊರೊನಾ ವೈರಸ್ ತಗುಲಿದ್ದು ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,97,535ಕ್ಕೆ ಏರಿಕೆಯಾಗಿದೆ.ಮೊದಲ ಬಾರಿಗೆ ಭಾರತದಲ್ಲಿ ದಿನವೊಂದರಲ್ಲಿಯೇ ಹತ್ತು ಸಾವಿರ ಸೋಂಕು ವರದಿಯಾಗಿದೆ.ಈ ಮೂಲಕ ಬ್ರಿಟನ್ ದೇಶವನ್ನು ಭಾರತ ಹಿಂದಿಕ್ಕಿಂತಾಗಿದ್ದು, ರಷ್ಯಾ, ಬ್ರೆಝಿಲ್ ಮತ್ತು ಅಮೆರಿಕ ದೇಶಗಳು ಮಾತ್ರ ಇದೀಗ ಭಾರತಕ್ಕಿಂತ ಹೆಚ್ಚಿನ ಸೋಂಕಿತರನ್ನು ಹೊಂದಿದೆ.

 

ರಷ್ಯಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4.93 ಲಕ್ಷ ಆಗಿದ್ದರೆ ಬ್ರೆಝಿಲ್‌ನಲ್ಲಿ 7.72 ಲಕ್ಷ ಹಾಗೂ ಅಮೆರಿಕದಲ್ಲಿ 20 ಲಕ್ಷ ಮಂದಿಗೆ ಸೋಂಕು ತಗುಲಿದೆ. ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 396 ಜನರು ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟು ದೇಶದಲ್ಲಿ 8498 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೇ 24ರಂದು ಭಾರತ ವಿಶ್ವದಲ್ಲಿ ಗರಿಷ್ಠ ಸೋಂಕಿತರನ್ನು ಹೊಂದಿದ ಅಗ್ರ 10 ರಾಷ್ಟ್ರಗಳ ಪೈಕಿ ಸ್ಥಾನ ಪಡೆದ ಬಳಿಕ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಸೋಂಕು ಹೆಚ್ಚುತ್ತಿದೆ. ಕೇವಲ 18 ದಿನಗಳಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೇರಿದೆ.

Also Read  ಇನ್‌ಸ್ಟಾಗ್ರಾಮ್ ಸರ್ವರ್‌ ಡೌನ್‌..!      ➤ 46 ಸಾವಿರಕ್ಕೂ ಅಧಿಕ ಬಳಕೆದಾರರ ಪರದಾಟ

 

error: Content is protected !!
Scroll to Top