ಚೀನಾದ ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ಮೋದಿ..!!!

(ನ್ಯೂಸ್ ಕಡಬ) newskadaba.com ಬೀಜಿಂಗ್,ಸೆ.03, ಬ್ರಿಕ್ಸ್ ಸಮಾವೇಶದಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಆದಿತ್ಯವಾರ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ.

ಡೋಕ್ಲಾಂ ಪ್ರದೇಶದಲ್ಲಿನ 73 ದಿನಗಳ ಸೇನಾ ಬಿಕ್ಕಟ್ಟು ಅಂತ್ಯಗೊಂಡ ಬಳಿಕ, ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸೀ ಜಿನ್‌ಪಿಂಗ್ ಬ್ರಿಕ್ಸ್ ಸಮಾವೇಶದಲ್ಲಿ ಇದೇ ಮೊದಲ ಬಾರಿ ಮುಖಾಮುಖಿಯಾಗಲಿದ್ದು, ಚೀನಾದ ಫ್ಯೂಜಿಯಾನ್ ಪ್ರಾಂತ್ಯದ ಕ್ಸಿಯಾಮೆನ್‌’ನಲ್ಲಿ ನಡೆಯಲಿರುವ ಮೂರು ದಿನಗಳ ಸಮಾವೇಶಕ್ಕೆ ಭಾನುವಾರ ಚಾಲನೆ ದೊರೆಯಲಿದೆ.

ಮೂರು ದಿನಗಳ ಸಮಾವೇಶದಲ್ಲಿ, ಉಭಯ ರಾಷ್ಟ್ರಗಳ ನಾಯಕರು ಪರಸ್ಪರ ಮಾತುಕತೆ ನಡೆಸುವ ಸಾಧ್ಯತೆಯಿದೆ. ಸಮಾವೇಶದಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ನಾಯಕರು ಭಾಗವಹಿಸಲಿದ್ದಾರೆ. ಇಂತಹ ಸಮಾವೇಶಗಳ ಸಂದರ್ಭ ದ್ವಿಪಕ್ಷೀಯ ಮಾತುಕತೆ ನಡೆಯುವುದು ಸಾಮಾನ್ಯ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

Also Read  ಕೋಲ್ಕತ್ತಾ ವೈದ್ಯೆಯ ಕೊಲೆ- ಆರೋಪಿಯನ್ನು ಗಲ್ಲಿಗೇರಿಸಿ ಎಂದ ಅತ್ತೆ..!!

ಸಮಯ ದೊರೆತರೆ, ಮಾತುಕತೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ವರ್ಷದ ಸಮಾವೇಶಕ್ಕೆ ಈಜಿಪ್ಟ್, ಗಿನಿ, ಮೆಕ್ಸಿಕೊ, ತಜಕಿಸ್ತಾನ ಮತ್ತು ಥಾಯ್ಲೆಂಡ್ ದೇಶಗಳನ್ನು ಚೀನಾ ‘ಬ್ರಿಕ್ಸ್ ಪ್ಲಸ್’ ಪರಿಕಲ್ಪನೆಯಡಿ ಆಹ್ವಾನಿಸಿದೆ.

 

error: Content is protected !!
Scroll to Top